ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ
ಬೆಂಕಿ ಬಸಣ್ಣ
ನವೆಂಬರ್ 2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಆಲ್ಬನಿಯಲ್ಲಿ ಕನ್ನಡ-ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ "ಕನ್ನಡ-ವೈಭವ" ಎಂಬ ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ ಪ್ರಸ್ತುತ ಪಡಿಸಿದರು.
ಬೆಂಕಿ ಬಸಣ್ಣ
ನವೆಂಬರ್ 2ರಂದು ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಆಲ್ಬನಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು. ಇಲ್ಲಿಯ ಕನ್ನಡ-ಕಲಿ ಶಾಲೆಯ ಪುಟಾಣಿ ಮಕ್ಕಳು, ಲತಾ ಮೇಡಂ ನಿರ್ದೇಶನದ "ಕನ್ನಡ-ವೈಭವ" ಎಂಬ ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಚರಿತ್ರೆಯನ್ನು ಶರಣರು, ಸಂತರು, ಕವಿಗಳು, ಮಹಾರಾಜರು, ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರು, ಕ್ರಿಕೆಟ್ ಆಟಗಾರರು, ವಿಜ್ಞಾನಿಗಳು, ಮುಂತಾದವವ ರೂಪದಲ್ಲಿ ಪ್ರಸ್ತುತ ಪಡಿಸಿದರು.
ಆಲ್ಬನಿ ಕನ್ನಡ ಸಂಘದ ಅಧ್ಯಕ್ಷ ವಿಶ್ವಾಸ್ ಗೌಡ , ಕಾರ್ಯದರ್ಶಿ ಉಮಾ ಬೆಂಕಿ, ಖಜಾಂಚಿ ಸುನಿತಾ ವಿಜಯ್ ಕಾರ್ಯಕ್ರಮದ ಸಂಘಟನೆ ಜವಾಬ್ದಾರಿ ಹೊತ್ತುಕೊಂಡಿದ್ದರು. 40 ವರ್ಷಗಳಿಂದ ಆಲ್ಬನಿಯಲ್ಲಿ ನೆಲೆಸಿರುವ ಜಯಾ ಮತ್ತು ಎಂ. ಆರ್. ಬಾಲಕೃಷ್ಣ ಮತ್ತು ಮೈತಲಿ ಹಾಗೂ ಡಾ. ದಿವಾಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶೀಲಾ ರಂಗರಾಜ್ ಮತ್ತು ಉಮಾ ಶ್ರೀನಿವಾಸ್ ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಹಿನ್ನಲೆ ಗಾಯಕರಾದ ಒಹೈವೋ ರಾಜ್ಯದ ರಾಮ ಪ್ರಸಾದ್, ನಾರ್ತ್ ಕ್ಯಾರೊಲಿನ ರಾಜ್ಯದ ರವಿ ಗೂಟಿ ಮತ್ತು ಬೋಸ್ಟೋನ್ ನಗರದ ಅಕ್ಕಿ ಮಧು ಹೆಬ್ಬಾಳ , ಸೌಮ್ಯಶ್ರೀ , ಲಕ್ಷ್ಮಿ ರಮೇಶ್, ರಾಮನಾಥ್ , ರಮೇಶ್ ಯಾಲಕ್ಕಿಶೆಟ್ಟರ್ , ಅನುಷಾ ಕುಲ್ಕರ್ಣಿ, ವರವಾಣಿ ದ್ವಾರಕಿ ಮುಂತಾದವರು, "ರಾಜ್- ವೈಭವ" ಎಂಬ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಪರ ಊರುಗಳಿಂದ ಬಂದ ಕಲಾವಿದರಿಗೆ ಉಮಾ-ಬೆಂಕಿ ಬಸಣ್ಣ ಅವರ ಮನೆಯಲ್ಲಿ ಆತಿಥ್ಯ ಮತ್ತು ವಸತಿ ಒದಗಿಸಲಾಗಿತ್ತು.
ಲತಾ ಮತ್ತು ನಂದಕಿಶೋರ್, ತಾವೇ ಹಾದಿ, ಕುಣಿದ ರೋಮ್ಯಾಂಟಿಕ್ -ಜಾನಪದ -ನೃತ್ಯ ‘ಮಾತಾಡ್ -ಮಾತಾಡ್ ಮಲ್ಲಿಗೆ’ ರಸಿಕರ ಮೈ ಜುಂ ಎನ್ನಿಸಿತು. ಪುಟಾಣಿಗಳಾದ ಜೀವಿಕ ಬೆಂಕಿ ಮತ್ತು ಸಹನಾ ರಾವ್ ಮಾಡಿದ ಪುರಂದರ ದಾಸರ ‘ತಂಬೂರಿ ಮೀಟಿದವ’ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿದವು . ಸಿಂಚನಾ , ಚೈತಾಲಿ ಮತ್ತು ಅಲ್ಪಾ ಗೌಡ ತಮ್ಮ ಸುಮಧುರ ಗಾಯನದಿಂದ ಮನಸೂರೆಗೊಂಡರು . ಪ್ರಾಂತ್ಯದ 40+ ಕ್ರಿಕೆಟ್ ಟ್ರೋಫಿ ಗೆದ್ದ ಅಲ್ಬನಿ ಕನ್ನಡ ಸಂಘದ ಕ್ರಿಕೆಟ್ ಆಟಗಾರರಾದ ಕಿರಣ್, ರವಿ ಯಲಿಗಾರ, ಪ್ರವೀಣ್ ರಾವ್ ರನ್ನು ಬೆಂಕಿ ಬಸಣ್ಣ ಸನ್ಮಾನಿಸಿದರು.