ಸಿಎಂ ಊರೂರು ಸುತ್ತಿದ್ರೆ ಸಾಲಲ್ಲ, ಈ ಕೆಲ್ಸ ಮಾಡ್ಬೇಕಿತ್ತು: ಕೈ ನಾಯಕ ಕಿಡಿ!

ಮೈತ್ರಿನಾಯಕರ ನಡುವಿನ ಭಿನ್ನಮತ ಶಮನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಒಬ್ಬರು ಒಂದು ಹೇಳಿಕೆ ಕೊಟ್ಟು ಸುಮ್ಮನಾದಾಗ ಇನ್ನೊಬ್ಬರು ಇನ್ನೊಂದು ಹೇಳಿಕೆ ಕೊಡುತ್ತಿದ್ದಾರೆ.

First Published Jun 22, 2019, 3:25 PM IST | Last Updated Jun 22, 2019, 3:25 PM IST

ಬೆಂಗಳೂರು (ಜೂ. 22): ಮೈತ್ರಿನಾಯಕರ ನಡುವಿನ ಭಿನ್ನಮತ ಶಮನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಒಬ್ಬರು ಒಂದು ಹೇಳಿಕೆ ಕೊಟ್ಟು ಸುಮ್ಮನಾದಾಗ ಇನ್ನೊಬ್ಬರು ಇನ್ನೊಂದು ಹೇಳಿಕೆ ಕೊಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ, ಸಿಎಂ ಎಚ್.ಡಿ. ಕುಮಾರಸ್ವಾಮಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಬಗ್ಗೆ ಕ್ಯಾತೆ ತೆಗೆದರು.

ಕುಮಾರಸ್ವಾಮಿ ಊರಿಡಿ ಸಂಚಾರ ಮಾಡಿದ್ರೆ ಸಾಕಾಗೋದಿಲ್ಲ ಎಂದಿರುವ ಚಿಕ್ಕಬಳ್ಳಾಪುರ ಮಾಜಿ ಸಂಸದ  ವೀರಪ್ಪ ಮೊಯ್ಲಿ, ಸಿಎಂ ಮಾಡ್ಬೇಕಾಗಿರೋದೇನು ಎಂಬುವುದನ್ನೂ ತಿಳಿಸಿದರು. ಅವರು ಏನು ಹೇಳಿದ್ದಾರೆ?  ಈ ವಿಡಿಯೋ ನೋಡಿ....