ಮೊಬೈಲ್ ನೋಡ್ತಾ ಕೂತಿದ್ದ, ದಪ್ಪನೆ ಕೆಳಗೆ ಬಿತ್ತು ದೊಡ್ಡ ಹಾವು
ಇಲಿಯೊಂದನ್ನು ಬೆನ್ನಟ್ಟಿ ಬಂದ ಹಾವನ್ನು(Snake) ಮೇಲ್ಭಾಗದಲ್ಲಿ ನೋಡಿ ಬೆಚ್ಚಿಬಿದ್ದ ಹುಡುಗ ಚಂಗನೆ ಹಾರಿ ಹೊರಗೆ ಬಿದ್ದಿದ್ದಾನೆ. ಹುಡುಗ ಓಡಿ ಹೋಗ್ತಿದ್ದಂತೆ ಹಾವು ಕೂಡಾ ಇಲಿಯನ್ನು ಹಿಡಿಯಲು ದೊಪ್ಪನೆ ಕೆಳಗೆ ಬಿದ್ದಿದೆ.
ಫೋನ್‌ನಲ್ಲಿ ಬ್ಯುಸಿ ಇದ್ದ ಹುಡುಗನ ಅಂಗಡಿಯಲ್ಲಿ ಹಾವು ನುಗ್ಗಿದ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ(Social Media) ಬೆಚ್ಚಿ ಬೀಳಿಸೋ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತವೆ. ಇಲ್ಲೊಂದು ಕಡೆ ನಡೆದಿರೋ ಘಟನೆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಹುಡುಗನೊಬ್ಬ ಪಾನ್ ಶಾಪ್‌ಗೆ ಬಂದು ಮೊಬೈಲ್ (Mobile)ನೋಡುತ್ತಾ ಇರುತ್ತಾನೆ.
ಚಿನ್ನದಂಗಡಿಯಲ್ಲಿ ಕಳ್ಳ ದಂಪತಿ ಸಿಕ್ಕಿ ಬಿದ್ದಿದ್ದೇ ರೋಚಕ..!
ಅಚಾನಕ್ ಆಗಿ ಆತ ಮೇಲೆ ನೋಡಿದಾಗ ಬೆಚ್ಚಿಬಿದ್ದಿದ್ದಾನೆ. ಇಲಿಯೊಂದನ್ನು ಬೆನ್ನಟ್ಟಿ ಬಂದ ಹಾವನ್ನು(Snake) ಮೇಲ್ಭಾಗದಲ್ಲಿ ನೋಡಿ ಬೆಚ್ಚಿಬಿದ್ದ ಹುಡುಗ ಚಂಗನೆ ಹಾರಿ ಹೊರಗೆ ಬಿದ್ದಿದ್ದಾನೆ. ಹುಡುಗ ಓಡಿ ಹೋಗ್ತಿದ್ದಂತೆ ಹಾವು ಕೂಡಾ ಇಲಿಯನ್ನು ಹಿಡಿಯಲು ದೊಪ್ಪನೆ ಕೆಳಗೆ ಬಿದ್ದಿದೆ. ಆದರೂ ಇಲಿ ಸಿಕ್ಕಿರಲಿಲ್ಲ. ನಂತರ ಹಾವು ಇಲಿಯನ್ನು ಹುಡುಕುತ್ತಾ ಪಾನ್ ಶಾಪ್ ಒಳಗೂ ನುಗ್ಗಿದೆ.