Asianet Suvarna News Asianet Suvarna News

IMA ವಂಚನೆ: ಅಸಿಸ್ಟೆಂಟ್ ಕಮಿಷನರ್ SIT ಬಲೆಗೆ

IMA ಬಹುಕೋಟಿ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ SIT ಅಧಿಕಾರಿಗಳು ಅಸಿಸ್ಟೆಂಟ್ ಕಮಿಷನರೊಬ್ಬರನ್ನು ಬಂಧಿಸಿದ್ದಾರೆ. 

ಬೆಂಗಳೂರು (ಜು.06): IMA ಬಹುಕೋಟಿ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ SIT ಅಧಿಕಾರಿಗಳು ಅಸಿಸ್ಟೆಂಟ್ ಕಮಿಷನರೊಬ್ಬರನ್ನು ಬಂಧಿಸಿದೆ. ಈ ಹಿಂದೆ IMA ವಿರುದ್ಧ ತನಿಖೆ ನಡೆಸಲು ಸರ್ಕಾರವು ಸಹಾಯಕ ಆಯುಕ್ತ ಎಲ್. ನಾಗರಾಜ್ ಎಂಬವರನ್ನು ನೇಮಿಸಿತ್ತು.

ಆದರೆ, ನಾಗರಾಜ್ ಲಂಚ ಪಡೆದು ನೈಜ ಸಂಗತಿಯನ್ನು ಮರೆಮಾಚಿ ಮನ್ಸೂರ್ ಖಾನ್ ಒಡೆತನದ IMA ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಾಗರಾಜ್‌ರನ್ನು SIT ಅಧಿಕಾರಿಗಳು ಬಂಧಿಸಿದ್ದಾರೆ.

ಲಕ್ಷಾಂತರ ಮಂದಿ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ IMA ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ SITಯು ಕಂಪನಿಯ ನಿರ್ದೇಶಕರು, BDA ಅಧಿಕಾರಿ ಹಾಗೂ ಬಿಬಿಎಂಪಿ ಸದಸ್ಯರೊಬ್ಬರನ್ನು ಈಗಾಗಲೇ ಬಂಧಿಸಿದೆ.

Video Top Stories