ಬೆಂಗಳೂರು, [ಜೂನ್.12]: IMA ಜುವೆಲರ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ 7 ಮಂದಿ ನಿರ್ದೇಶಕರು ಪೊಲೀಸರ ಮುಂದೆ ಶರಣಾಗಿದ್ದಾರೆ.

ಇಂದು [ಬುಧವಾರ] ಸಂಜೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರ ಮುಂದೆ ಐಎಂಎ ಕಂಪನಿಯ ಏಳು ನಿರ್ದೇಶಕರು ಶರಣಾಗಿದ್ದಾರೆ. ನಿಜಾಮುದ್ದೀನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಶದ್ ಖಾನ್, ವಾಸಿಮ್, ಅನ್ಸರ್ ಪಾಷಾ, ದಾದಾ ಪೀರ್ ಶರಣಾದ ಆರೋಪಿಗಳು.

ಶರಣಾದ ಆರೋಪಿಗಳನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬಳಿಕ  4ನೇ ಎಸಿಎಂಎಂ ನ್ಯಾಯಲಯದ ನ್ಯಾಯಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ, ಐಎಂಎ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾಗಿದ್ದಾನೆ. ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಟಿ ತಿನಿಖೆ ವಹಿಸಿದ್ದು, ಈಗಾಗಲೇ ತನಿಖಾ ತಂಡವು ಸಹ ರಚನೆಯಾಗಿದೆ.