
ಸೌದಿಯ ದೀಪಾವಳಿ ಉಡುಗೊರೆ: ಮುಸ್ಲಿಂ ದೇಶಗಳ ಆಲೋಚನೆ ಬದಲಿಸುತ್ತಾ ನಿರ್ಣಯ?
ಸೌದಿ ಅರೇಬಿಯಾವು ದೀಪಾವಳಿಯ ಸಂದರ್ಭದಲ್ಲಿ ಕಫಾಲ ವ್ಯವಸ್ಥೆಯನ್ನು ರದ್ದುಗೊಳಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಐತಿಹಾಸಿಕ ಸುಧಾರಣೆಯು ವಿದೇಶಿ ಕಾರ್ಮಿಕರಿಗೆ ಹೊಸ ಭರವಸೆ ನೀಡಿದ್ದು, ಈ ಬದಲಾವಣೆಯ ಹಿಂದೆ ಪ್ರಧಾನಿ ಮೋದಿಯವರ ಪಾತ್ರ ಮತ್ತು ಇದರ ಪರಿಣಾಮಗಳ ಕುರಿತು ಈ ವರದಿ ವಿವರಿಸುತ್ತದೆ.
ಇಡೀ ದೇಶವೇ ದೀಪಾವಿ ಸಂಭ್ರಮದಲ್ಲಿದೆ.. ಆ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸೋ ಹಾಗೆ, ದೂರದ ಸೌದಿಯಲ್ಲೊಂದು ಘಟನೆ ನಡೆದಿದೆ.. ಸೌದಿ ದೊರೆಯ ಅದೊಂದು ತೀರ್ಮಾನ, ಮುಸ್ಲಿಮ್ ರಾಷ್ಟ್ರಗಳಿಗೆ ಸಂದೇಶವನ್ನೂ ಕೊಟ್ಟಿದೆ.. ಭಾರತದ ಸಂಭ್ರಮವನ್ನೂ ಹೆಚ್ಚಿಸಿದೆ.. ಆ ಒಂದು ನಿರ್ಣಯದಿಂದ, ಹತ್ತಾರು ದೇಶಗಳ ಸಾಮಾನ್ಯ ಜನರಿಗೆ ಖುಷಿಯಾಗಿರೋದು ಎಷ್ಟು ಸತ್ಯವೋ, ಆ ಖುಷಿಯ ಹಿಂದೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಇರೋದೂ ಅಷ್ಟೇ ಸತ್ಯ.. ಅದೇನು ಅನ್ನೋದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..