ಪಾಕಿಸ್ತಾನ ಜಲಸ್ಮಶಾನ: 350ಕ್ಕೂ ಅಧಿಕ ಬಲಿ, ಪ್ರಕೃತಿಯ ರೌದ್ರಕ್ಕೆ ನೆರೆ ರಾಷ್ಟ್ರ ತತ್ತರ!

ಪಾಕಿಸ್ತಾನ ಮತ್ತೆ ಮಹಾಪ್ರವಾಹದ ಕಾಟಕ್ಕೆ ತತ್ತರಿಸಿದೆ. ಮಳೆಯ ಉಗ್ರ ತಾಂಡವದಿಂದ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸಾವಿರಾರು ಜನರ ಬದುಕು ದುಸ್ತರವಾಗಿದೆ.

Share this Video
  • FB
  • Linkdin
  • Whatsapp

ಪಾಕಿಸ್ತಾನ ಮತ್ತೆ ಮಹಾಪ್ರವಾಹದ ಕಾಟಕ್ಕೆ ತತ್ತರಿಸಿದೆ. ಮಳೆಯ ಉಗ್ರ ತಾಂಡವದಿಂದ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಸಾವಿರಾರು ಜನರ ಬದುಕು ದುಸ್ತರವಾಗಿದೆ. ಖೈಬರ್ ಪಖ್ತುಂಖ್ವಾ ಸೇರಿದಂತೆ ಹಲವು ಭಾಗಗಳು ಸ್ಮಶಾನ ಸ್ಥಿತಿಗೆ ತಲುಪಿದ್ದು, ಅಳು-ಆಕ್ರಂದನದ ನಡುವೆ ಜನರು ಉಸಿರು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಪ್ರಕೃತಿಯ ಮುನಿಸಿಗೆ ಮಾನವೀಯ ಕಾರಣಗಳೇ ಹಿನ್ನೆಲೆ ಎನ್ನಲಾಗುತ್ತಿದ್ದು, ಇದೇ ವೇಳೆ ಭಾರತದ ಉತ್ತರ ಭಾಗದಲ್ಲಿಯೂ ಮೇಘಸ್ಫೋಟ ಮತ್ತು ಪ್ರವಾಹದ ಕಾಟ ಹೆಚ್ಚಾಗಿದೆ. ಮಾನವನ ನಿರ್ಲಕ್ಷ್ಯ ಪ್ರಕೃತಿಯ ರೌದ್ರಕ್ಕೆ ಕಾರಣ ಎಂಬ ಸತ್ಯ ಮತ್ತೆ ಸಾಬೀತಾಗಿದೆ.

Related Video