ಸಿನಿಮೀಯ ಶೈಲಿಯಲ್ಲಿ ಚಲಿಸುವ ರೈಲಿನ ಅಡಿಯಲ್ಲಿ ಮಲಗಿದ ವ್ಯಕ್ತಿ! ಆಮೇಲೆ ಆಗಿದ್ದೇನು? ವಿಡಿಯೋ ವೈರಲ್

ಕೇರಳದಲ್ಲಿ ವ್ಯಕ್ತಿಯೊಬ್ಬ ರೈಲ್ವೇ ಟ್ರ್ಯಾಕ್‌ನಲ್ಲಿ ನಡೆಯುವಾಗ ದಿಢೀರ್ ರೈಲು ಬಂದಿದೆ. ಆಗ ಆತ ರೈಲ್ವೇ ಟ್ರ್ಯಾಕ್‌ನಲ್ಲೇ ಮಲಗಿ ಜೀವ ಉಳಿಸಿಕೊಂಡಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ

First Published Dec 25, 2024, 5:15 PM IST | Last Updated Dec 25, 2024, 5:15 PM IST

ಕೇರಳದ ಕಣ್ಣೂರಿನ ಪನ್ನೆನ್‌ ಪಾರಾದಲ್ಲಿ ವ್ಯಕ್ತಿಯೊಬ್ಬ ಪವಾಡಸದೃಶ ರೀತಿಯಲ್ಲಿ ರೈಲು ದುರಂತದಿಂದ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ರೈಲಿನ ಹಳಿಯ ಮೇಲೆ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ. ಈ ವೇಳೆ ಸಡನ್ ಆಗಿ ಬಂದ ರೈಲು, ಇತ್ತ ಗೊಂದಲಕ್ಕೀಡಾದ ವ್ಯಕ್ತಿ;  ರೈಲು ಸಮೀಪಿಸುತ್ತಿದ್ದಂತೆಯೇ ಹಳಿಗಳ ಮೇಲೆ ಅಡ್ಡ ಮಲಗಿ ಸೇಫ್ ಆಗಿದ್ದಾನೆ. ಇನ್ನು ರೈಲು ಮುಂದಕ್ಕೆ ಹೋಗ್ತಿದ್ದಂತೆ ಹಳಿಯಿಂದ ಎದ್ದು ಹೋದ ವ್ಯಕ್ತಿ; ಘಟನೆಯನ್ನು ಕಣ್ಣಾರೆ ಕಂಡ  ಸ್ಥಳೀಯ ನಿವಾಸಿ ಶ್ರೀಜಿತ್‌ನಿಂಡ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ