ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

ಅಯೋಧ್ಯೆ ಕೊನೆ ದಿನದ ವಿಚಾರಣೆ ವೇಳೆ ಹೈಡ್ರಾಮಾ| ಸಿಜೆಐ ಮುಂದೆಯೇ ಪುಸ್ತಕ ಹರಿದು ಹಾಕಿದ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ| ಹಿಂದೂ ಮಹಾಸಭಾ ಪರ ವಕೀಲ ಪ್ರದರ್ಶಿಸಿದ ಪುಸ್ತಕ| ಮಾಜಿ ಐಪಿಎಸ್ ಅಧಿಕಾರಿ  ಕಿಶೋರ್ ಬರೆದಿರುವ ಅಯೋಧ್ಯೆ ರಿವಿಸಿಟೆಡ್ ಪುಸ್ತಕ ಹರಿದ ರಾಜೀವ್ ಧವನ್| ರಾಜೀವ್ ಧವನ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಜೆಐ ರಂಜನ್ ಗೊಗೋಯ್| ನ್ಯಾಯಪೀಠದಿಂದ ಎದ್ದು ಹೊರನಡೆಯುವುದಾಗಿ ಎಚ್ಚರಿಕೆ ನೀಡಿದ ಗೊಗೊಯ್| ತಮ್ಮ ವರ್ತನೆಗೆ ನ್ಯಾಯಾಲಯದ ಕ್ಷಮೆ ಕೇಳಿದ ರಾಜೀವ್ ಧವನ್|

Share this Video
  • FB
  • Linkdin
  • Whatsapp

ನವದೆಹಲಿ(ಅ.16): ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟ್'ನಲ್ಲಿ ನಡೆಯುತ್ತಿರುವ ವಿಚಾರಣೆಯ ಅಂತಿಮ ದಿನ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.

ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು ನ್ಯಾಯಾಲಯದಲ್ಲಿ ಪ್ರದರ್ಶಿಸಿದ ಪುಸ್ತಕ ಹಾಗೂ ನಕ್ಷೆ ತೀವ್ರ ವಿವಾದ ಸೃಷ್ಟಿಸಿದ್ದು, ಈ ಪುಸ್ತಕವನ್ನು ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಬರೆದಿರುವ ಅಯೋಧ್ಯೆ ರಿವಿಸಿಟೆಡ್ ಎಂಬ ಹೆಸರಿನ ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್, ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದರು.

ರಾಜೀವ್ ಧವನ್ ವರ್ತನೆಗೆ ತೀವ್ರ ಆಕ್ಷೇಪದ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಈ ರೀತಿಯ ವರ್ತನೆ ಒಪ್ಪಲು ಸುತಾರಾಂ ಸಾಧ್ಯವಿಲ್ಲ ಎಂದು ಖಡ್ ಎಚ್ಚರಿಕೆ ನೀಡಿದರು. ಅಲ್ಲದೇ ತಾವು ನ್ಯಾಯಪೀಠದಿಂದ ಎದ್ದು ಹೊರನಡೆಯುವುದಾಗಿ ಬೆದರಿಕೆಯೊಡ್ಡಿದರು.

ಸಿಜೆಐ ಎಚ್ಚರಿಕೆಗೆ ಬೆದರಿದ ರಾಜೀವ್ ಧವನ್, ತಮ್ಮ ವರ್ತನೆಗೆ ಕ್ಷಮೆ ಕೋರಿದರಲ್ಲದೇ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಪ್ರಕರಣದ ಪ್ರತಿದಿನದ ವಿಚಾರಣೆ ಇಂದು ಸಂಜೆ 5 ಗಂಟೆಗೆ ಅಂತ್ಯವಾಗಲಿದ್ದು, ಇದೇ ನವೆಂಬರ್ 4 ಅಥವಾ 5 ರಂದು ತೀರ್ಪು ಹೊರಬೀಳಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಪ್ರಕರಣದ ಶೀಘ್ರ ಇತ್ಯರ್ಥದ ಆಶಾವಾದ ಮೂಡಿಸಿದೆ.

Related Video