Asianet Suvarna News Asianet Suvarna News

ಬಿಎಸ್‌ವೈ ಅಗ್ನಿಪರೀಕ್ಷೆಗೆ ಪ್ರತಿತಂತ್ರ! ಕಾಂಗ್ರೆಸ್ ನಾಯಕರಿಂದ ರಾಜಿ ಮಂತ್ರ?

Jul 25, 2019, 5:45 PM IST

ಬೆಂಗಳೂರು (ಜು.25): ಸದನದಲ್ಲಿ ಬಹುಮತ ಸಾಬೀತುಪಡಿಸಲಾಗದೇ ಮೈತ್ರಿ ಸರ್ಕಾರ ಪತನವಾಗಿದೆ. ಸರ್ಕಾರ ರಚಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ನಿರ್ದೇಶನಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ತನ್ನ ರಾಜಕೀಯ ತಂತ್ರವನ್ನು ಮುಂದುವರಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮುಂಬೈಗೆ ‘ದಂಡಯಾತ್ರೆ’ ಹೊರಟಿದ್ದಾರೆ. ಅತೃಪ್ತರ ಮನವೊಲಿಕೆಯ ಕಸರತ್ತು ನಡೆಸಲಿದ್ದಾರೆಯೇ? ಇಲ್ಲಿದೆ ಹೆಚ್ಚಿನ ವಿವರ...