Asianet Suvarna News Asianet Suvarna News

ಭಾರತಕ್ಕೆ ಉಗ್ರರ ಎಂಟ್ರಿ..! ದಕ್ಷಿಣ ಭಾರತವೇ ಟಾರ್ಗೆಟ್..?

Sep 10, 2019, 12:56 PM IST

ಮುಂಬೈ ಮಾದರಿಯ ದಾಳಿಗೆ ಉಗ್ರರು ಸಂಚು ರೂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. 'ಸಮುಂದರಿ' ಜಿಹಾದ್ ಎಂಬ ತಂತ್ರವನ್ನು ಪ್ರಯೋಗಿಸಲು ಉಗ್ರರು ಸಿದ್ಧತೆ ನಡೆಸಿದ್ದು, ಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳುತ್ತಿದ್ದಾರೆ. ಈ ಬಗ್ಗೆ ಭಾರತಕ್ಕೆ ಸಕ್ಷ್ಯಾಧಾರಗಳೂ ಲಭ್ಯವಾಗಿದೆ. ಉಗ್ರರು ದಕ್ಷಿಣ ಭಾರತವನ್ನೇ ಟಾರ್ಗೆಟ್ ಮಾಡಿದ್ದು ಈ ಬಗ್ಗೆ ಸೇನೆ ಎಚ್ಚರಿಕೆ ನೀಡಿದೆ. ಗುಜರಾತ್‌ನ ಸರ್‌ಕ್ರೀಕ್ ಕೊಲ್ಲಿಯಲ್ಲಿ ಬೋಟ್‌ಗಳೂ ಪತ್ತೆಯಾಗಿವೆ. ಬೋಟ್‌ಗಳನ್ನು ಸೇನೆ ವಶಕ್ಕೆ ಪಡೆದಿದೆ. ಉಗ್ರರ ನುಸುಳುವಿಕೆ ಹಿನ್ನೆಲೆಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಹಾಗೆಯೇ ತಿರುಪತಿ, ಆಂದ್ರದ ಶ್ರೀಹರಿಕೋಟಾದಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ.