ಪ್ರತಿಭಟನೆ ತಡೆಯಲು ಕುಟಿಲ ಪ್ರಯತ್ನ, ಮಡಿಕೇರಿ ಚಲೋ ಮುಂದೂಡಿಕೆ: ಸಿದ್ದರಾಮಯ್ಯ

ಮಡಿಕೇರಿ ಚಲೋ ಮುಂದೂಡಿಕೆಯಾಗಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಕುಟಿಲ ಪ್ರಯತ್ನಗಳಿಂದ ಮಡಿಕೇರಿ ಚಲೋ ಮುಂದೂಡಿದ್ದಾರೆ ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಆಗಸ್ಟ್‌ 26 ರಂದು ಕಾಂಗ್ರೆಸ್‌ ಮಡಿಕೇರಿ ಚಲೋ ಮುಂದೂಡಿಕೆಯಾಗಿರುವ ಬಗ್ಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಡಿಕೇರಿ ಚಲೋ ಮುಂದೂಡಲು ಪಕ್ಷ ತೀರ್ಮಾನ ಕೈಗೊಂಡಿದೆ. ಡಿಸಿ, ಎಸ್ಪಿ ಎಲ್ಲ ಸೇರಿ 144 ಸೆಕ್ಷನ್‌ ಹಾಕಿದ್ದಾರೆ, ಡಿಸಿ ಆದೇಶ ಅಂದ್ರೆ ಸರ್ಕಾರದ ಆದೇಶವಿದ್ದಂತೆ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡಬಹುದು. ಆದರೆ, ವಿಪಕ್ಷದ ನಾಯಕನಾಗಿ ನಾನು ಹಾಗೆ ಮಾಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ನಮ್ಮ ಪ್ರತಿಭಟನೆ ತಡೆಯಲು ಕುಟಿಲ ಪ್ರಯತ್ನ ಮಾಡಿದ್ದಾರೆ ಎಂದೂ ವಿಪಕ್ಷ ನಾಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Related Video