ಚನ್ನಪಟ್ಟಣ ಉಪಕದನದಲ್ಲಿ ಒಕ್ಕಲಿಗಾಸ್ತ್ರ vs ಜಾತಿವ್ಯೂಹ; ಯೋಗೇಶ್ವರ್ ಗೆದ್ರೆ ಡಿಕೆಶಿ ಸಿಎಂ ಆಗ್ತಾರಾ?

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದರೆ, ಜೆಡಿಎಸ್ ಜಾತಿ ವ್ಯೂಹ ರಚಿಸಿದೆ. ಎರಡು ಬಾರಿ ಸೋತಿರುವ ಪುತ್ರನನ್ನು ಗೆಲ್ಲಿಸಲು ಕುಮಾರಸ್ವಾಮಿ ಹೊಸ ತಂತ್ರ ಹೆಣೆದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಅ.29): ಕರ್ನಾಟಕದಲ್ಲಿ ಈ ಹಿಂದೆ ಎಂದೂ ಕಂಡು ಕೇಳರಿಯದ ಯುದ್ಧ, ರಣರೋಚಕ ಮಿನಿಯುದ್ಧ ಶುರುವಾಗಿದೆ. ಚನ್ನಪಟ್ಟಣದ ಉಪಸಮರ ಗೆಲ್ಲಲು ರಣಕಲಿಗಳ ಯುದ್ಧ ತಂತ್ರ ಶುರುವಾಗಿದೆ. ಚನ್ನಪಟ್ಟಣ ರಣಕಣದಲ್ಲಿ ಕಾಂಗ್ರೆಸ್ ಬತ್ತಳಿಕೆಯಿಂದ ನುಗ್ಗಿ ಬಂದಿದೆ ಒಕ್ಕಲಿಗಾಸ್ತ್ರ. ಆದರೆ, ಹಳೇ ಚರಿತ್ರೆಯನ್ನು ಕೆದಕಿದ ಡಿಕೆ ಬ್ರದರ್ಸ್‌ಗಳ ಹಳೇ ಇತಿಹಾಸನನ್ನು ಕುಮಾರಣ್ಣ ಬಿಚ್ಚಿಟ್ಟಿದ್ದಾರೆ. ಚನ್ನಪಟ್ಟಣದಲ್ಲಿ ಸೈನಿಕನ ಗೆಲುವೇ ಡಿಕೆ, ಸಿಎಂ ಯಜ್ಞಕ್ಕೆ ಮೊದಲ ಮೆಟ್ಟಿಲು ಆಗಲಿದೆ. ಆದರೆ, ಅಲ್ಲಿ ಯಾರ ಗೆಲುವಾಗಲಿದೆ ಎನ್ನುವುದು ಕಾದು ನೋಡಬೇಕಿದೆ.

ಬೊಂಬೆಯಾಟವನ್ನು ಗೆಲ್ಲೋದಕ್ಕೆ ಕಾಂಗ್ರೆಸ್ ನಾಯಕರು ಒಕ್ಕಲಿಗ ಆಸ್ತ್ರ ಪ್ರಯೋಗಿಸ್ತಾ ಇದ್ರೆ, ಒಕ್ಕಲಿಗರ ಒಡ್ಡೋಲಗದಲ್ಲಿ ಮತ್ತೊಂದು ಜಾತಿ ವ್ಯೂಹ ಹೆಣೆದಿದ್ದಾರೆ ದಳಪತಿ ಕುಮಾರಸ್ವಾಮಿ. ಅಷ್ಟಕ್ಕೂ ಎರಡು ಬಾರಿ ಸೋತಿರೋ ಪುತ್ರನನ್ನು ಗೆಲ್ಲಿಸೋದಕ್ಕೆ ಎಚ್.ಡಿ.ಕೆ ಹೆಣೆದಿರೋ ಜಾತಿವ್ಯೂಹ ಆಗಿದೆ. ಚನ್ನಪಟ್ಟಣಕ್ಕೆ ಈಗ ಎದುರಾಗಿರೋದು ದೇಶವೇ ತಿರುಗಿ ನೋಡುವಂಥಾ ಚುನಾವಣೆ. ಇಲ್ಲಿ ಒಬ್ಬರೊಬ್ಬರದ್ದು ಒಂದೊಂದ ಅಸ್ತ್ರ. ಕಾಂಗ್ರೆಸ್'ನಿಂದ ಒಕ್ಕಲಿಗಾಸ್ತ್ರ, ದಳಪತಿಯಿಂದ ಜಾತಿವ್ಯೂಹ.. ಅವರದ್ದು ಸ್ವಾಭಿಮಾನದ ಕಹಳೆ, ಇವರದ್ದು ಭಾವನಾತ್ಮಕ ಅಸ್ತ್ರ. ಇದೇ ಇವತ್ತಿನ ಸುವರ್ಣ ಸ್ಪೆಷಲ್..

Related Video