25 ವರ್ಷಗಳ ನಂತರ ಹೈಜಾಕ್ ಸತ್ಯ? ಪಾಕಿಸ್ತಾನದ ಉಗ್ರರ ಹೆಸರು ಭೋಲಾ ಮತ್ತು ಶಂಕರ್ ಎಂದಿದ್ದೇಕೆ?

ಒಂದ್ ವೆಬ್ ಸಿರೀಸ್ ಪ್ರಸಾರ ಆದ್ರೆ, ಭಾರತದಂತ ಭಾರತ ಸರ್ಕಾರ, ನೋಟಿಸ್ ಕೊಡೋದ್ಯಾಕೆ..? ಇಷ್ಟಕ್ಕೂ ಇಡೀ ಘಟನೆ ತೋರಿಸಿದ್ದಾರಪ್ಪ, ಮಿಸ್ಟೇಕ್ ಏನಿದೆ..? ಇದು ಈಗ ನೆಟ್ ಫ್ಲಿಕ್ಸ್‌ನಲ್ಲಿ ಪ್ರಸಾರ ಆಗ್ತಿರೋ ಐಸಿ814-ದಿ ಕಂದಹಾರ್ ಹೈಜಾಕ್ ಅನ್ನೋ ವೆಬ್ ಸಿರೀಸ್ ಬಗ್ಗೆ ಕೇಳ್ತಿರೋ ಮಾತು. ಆದರೆ, ವಿಷಯ ಅಷ್ಟೇ ಅಲ್ಲ, ಉಗ್ರರ ಧರ್ಮವನ್ನೇ ಬದಲಿಸಿದ ಆರೋಪಾನೂ ಅವರ ಮೇಲಿದೆ

Share this Video
  • FB
  • Linkdin
  • Whatsapp

ಇದು 25 ವರ್ಷಗಳ ಹಿಂದೆ ನಡೆದಿದ್ದ ಕಥೆ. ಇಡೀ ಜಗತ್ತು 21ನೇ ಶತಮಾನವನ್ನ ಹೆಮ್ಮೆಯಿಂದ, ಸಂಭ್ರಮದಿಂದ ಸ್ವಾಗತಿಸ್ತಾ ಇರಬೇಕಾದ್ರೆ, ಇಡೀ ಜಗತ್ತಿನ ಎದುರು ಭಾರತ ತಲೆ ತಗ್ಗಿಸಿ ನಿಂತಿತ್ತು. ಯಾಕಂದ್ರೆ, ಮೂವರು ನಟೋರಿಯಸ್ ಉಗ್ರರನ್ನ ಸರ್ಕಾರವೇ ರಿಲೀಸ್ ಮಾಡ್ಬೇಕಾದ ಅನಿವಾರ್ಯತೆ ಎದುರಾಗಿತ್ತು. ಅದಕ್ಕೆಲ್ಲ ಕಾರಣವಾಗಿದ್ದು ಒಂದು ಹೈಜಾಕ್. ಐವರು ಉಗ್ರರ ಎದುರು, ಭಾರತ ಸರ್ಕಾರ ಮಂಡಿಯೂರಿತ್ತು.

Related Video