ತಮ್ಮ ಸಿನಿಮಾ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿರ್ತಾರೆ: ಲಿಂಗದೇವರು

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಇಹಲೋಕದ ಸಂಚಾರವನ್ನು ಮುಗಿಸಿದ್ದಾರೆ. ಇವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ 'ನಾನು ಅವನಲ್ಲ, ಅವಳು' ಚಿತ್ರ ನಿರ್ದೇಶಕ ಬಿಎಸ್ ಲಿಂಗದೇವರು ವಿಜಯ್‌ರನ್ನು ಸ್ಮರಿಸಿಕೊಂಡಿದ್ದು ಹೀಗೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 15): ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಇಹಲೋಕದ ಸಂಚಾರವನ್ನು ಮುಗಿಸಿದ್ದಾರೆ. ಇವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ 'ನಾನು ಅವನಲ್ಲ, ಅವಳು' ಚಿತ್ರ ನಿರ್ದೇಶಕ ಬಿಎಸ್ ಲಿಂಗದೇವರು ವಿಜಯ್‌ರನ್ನು ಸ್ಮರಿಸಿಕೊಂಡಿದ್ದು ಹೀಗೆ.

ಎಲ್ಲರ ನೋವಿಗೂ ಸ್ಪಂದಿಸುತ್ತಿದ್ದ ಜೀವ ವಿಜಯ್; ಭಾವುಕರಾದ ಡಾಲಿ ಧನಂಜಯ್!

' ಸಂಚಾರಿ ವಿಜಯ್‌ ಅವರನ್ನು ಕಳೆದುಕೊಂಡಿದ್ದು ಬಹಳ ನೋವಿನ ಸಂಗತಿ. ತುಂಬಾ ಕನಸುಗಳನ್ನು ಕಂಡಿದ್ದ ಹುಡುಗ. ಹೀಗಾಗಬಾರದಿತ್ತು. ಇದನ್ನು ನಾವು ಒಪ್ಪಿಕೊಳ್ಳಲೇಬೇಕು. ನಮ್ಮಿಬ್ಬರದು ನಟ, ನಿರ್ದೇಶಕ ಸಂಬಂಧ ಮಾತ್ರ ಆಗಿರಲಿಲ್ಲ. ನಮ್ಮ ಕುಟುಂಬದ ಜೊತೆಗೂ ಆತ್ಮೀಯ ಸಂಬಂಧ ಹೊಂದಿದ್ದರು. ಇವರ ಬದುಕು ಹೀಗಾಗುತ್ತದೆ ಎಂದು ಎಣಿಸಿರಲಿಲ್ಲ. ಅವರ ಸಿನಿಮಾ ಮೂಲಕ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ' ಎಂದು ಭಾವುಕರಾದರು. 

Related Video