ಚಿಕ್ಕಬಳ್ಳಾಪುರ ಜನರ ಮನಸ್ಸೇ ನನಗೆ ಬಿಗ್‌ಬಾಸ್‌, ಶಾಸಕ ಪ್ರದೀಪ್‌ ಈಶ್ವರ್‌ ಕೌಂಟರ್‌!

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆಗೆ ಹೋಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ, ಕೆಲ ಸಮಯವಷ್ಟೇ ಬಿಗ್‌ ಬಾಸ್‌ ಮನೆಯಲ್ಲಿದ್ದ ಅವರೀಗ ತಮ್ಮ ವಿರುದ್ಧ ಕೇಳಿ ಬಂದಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಅ.10): ನನಗೆ ಬೇರೆ ಯಾವ ಬಿಗ್‌ ಬಾಸ್‌ ಮನೆಯೂ ಬೇಕಿಲ್ಲ. ಚಿಕ್ಕಬಳ್ಳಾಪುರದ ಜನರ ಮನಸ್ಸೇ ನನ್ನ ಪಾಲಿಗೆ ಬಿಗ್‌ ಬಾಸ್‌ ಎಂದು ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ವಿರುದ್ಧ ಕೇಳಿ ಬಂದಿರುವ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ. ಜನರ ಪ್ರತಿನಿಧಿಯಾಗಿರುವ ವ್ಯಕ್ತಿ, ಬಿಗ್‌ ಬಾಸ್‌ ಮನೆಗೆ ಹೋಗಿರುವ ಬಗ್ಗೆ ಚಿಕ್ಕಬಳ್ಳಾಪುರ ಮಾಜಿ ಶಾಸಕ ಸುಧಾಕರ್‌ ಕಿಡಿಕಾರಿದ್ದರು.

ನಾನು ಜನರಿಗೆ ನೀಡಬೇಕಾದ ಸಮಯದಲ್ಲಿ ಬಿಗ್‌ ಬಾಸ್‌ ಮನೆಗೆ ಹೋಗಿಲ್ಲ. ನನ್ನ ವೈಯಕ್ತಿಕ ಸಮಯವನ್ನು ತ್ಯಾಗ ಮಾಡಿ ಬಿಗ್‌ ಬಾಸ್‌ ಮನೆಗೆ ಹೋಗಿದ್ದೇನೆ. ಜನರನ್ನು ತಲುಪೋಕೆ ಅದು ದೊಡ್ಡ ವೇದಿಕೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ಬಿಗ್​ಬಾಸ್​ ಮನೆಯಿಂದ ಹೊರಬಂದ ಶಾಸಕ ಪ್ರದೀಪ್​ ಈಶ್ವರ್​: ಕೊಟ್ಟ ಕಾರಣ ಕೇಳಿ ಟ್ರೋಲ್​ಗಳ ಸುರಿಮಳೆ!

ನಾನು ಈಗಾಗಲೇ ಕರ್ನಾಟಕದ ಜನರ ಮನಸ್ಸಿನಲ್ಲಿ ಬಿಲ್ಡ್‌ ಆಗಿದ್ದೇನೆ. ಮತ್ತೆ ನನಗೆ ಬಿಲ್ಡಪ್‌ ಬೇಕಿಲ್ಲ. ನಾನು ಪಂಚಾಯತಿಗಳಿಗೆ ಭೇಟಿ ನೀಡುತ್ತಿದ್ದೇನೆ. ನಮಸ್ತೆ ಚಿಕ್ಕಬಳ್ಳಾಪುರ ಮಾಡುತ್ತಿದ್ದೇನೆ. ಒಂದೇ ಜಯಂತಿ ಕಾರ್ಯಕ್ರಮವನ್ನು ಬೇರೆ ಬೇರೆ ಗುಂಪುಗಳು ಮಾಡಿದ್ದಾಗ ಅವುಗಳಿಗೆ ಹೋಗಿಲ್ಲ ಎಂದು ಹೇಳಿದ್ದಾರೆ

Related Video