ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿ ಸಕತ್​ ಟ್ರೋಲ್​ಗೆ ಒಳಗಾಗಿರುವ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಅವರು ಒಂದೇ ದಿನಕ್ಕೆ ಹೊರಬಂದಿದ್ದಾರೆ. ಅವರು ಕೊಟ್ಟ ಕಾರಣವೇನು?  

ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್​ ಈಶ್ವರ್​ ಬಿಗ್​ಬಾಸ್​ ಮನೆಯಿಂದ ಹೊರ ಬಂದಿದ್ದಾರೆ. ಹೋದ ದಿನದಿಂದಲೇ ಸಕತ್​ ಟ್ರೋಲ್​ಗೆ ಒಳಗಾಗಿದ್ದ ಪ್ರದೀಪ್​ ಅವರು ಹೋದ ಒಂದೇ ದಿನಕ್ಕೆ ಮರಳಿದ್ದಾರೆ. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಅವರು ಬಿಗ್​ಬಾಸ್ ಮನೆಯೊಳಕ್ಕೆ ಒಂದು ದಿನ ಲೇಟಾಗಿ ಎಂಟ್ರಿ ಕೊಟ್ಟಿದ್ದರು. ಅವರನ್ನು ನೋಡಿ ಉಳಿದ ಸ್ಪರ್ಧಿಗಳಿಗೂ ಅಚ್ಚರಿಯಾಗಿತ್ತು, ಅದೇ ರೀತಿ ಪ್ರೇಕ್ಷಕರೂ ಸಕತ್​ ಅಚ್ಚರಿ ಪಟ್ಟುಕೊಂಡಿದ್ದರು. ಆದರೆ ಅವರು ಹೋದದ್ದು ಅತಿಥಿಯಾಗಿ ಎನ್ನಲಾಗಿದೆ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋದ ಒಂದೇ ದಿನದಲ್ಲಿ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ಶುರುವಾಗಿದ್ದವು. ಇವರ ಅಮಾನತಿಗೆ ವಿಪಕ್ಷ ಆಗ್ರಹಿಸಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ನೂರಾರು ರೀತಿಯ ಮೀಮ್ಸ್​ಗಳು ಹರಿದಾಡುತ್ತಿದ್ದವು. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡಲು, ಬಿಗ್​ಬಾಸ್​ ಮನೆಗೆ ಹೋಗಿ ಸೇರಿಕೊಳ್ಳಲು ಅಲ್ಲ ಅಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು, ಖುದ್ದು ಕಾಂಗ್ರೆಸ್ಸಿಗರೂ ಕೆಲವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಅವರು ಹೊರಕ್ಕೆ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಆದರೆ ತಾವು ಬರುವುದಕ್ಕೆ ಅವರು ಕುತೂಹಲದ ಕಾರಣವನ್ನೂ ಕೊಟ್ಟಿದ್ದಾರೆ. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವುದಾಗಿ ಹೇಳಿದ್ದಾರೆ. ಬಿಗ್ ಬಾಸ್​ನಿಂದ ಬಂದ ಹಣವನ್ನ ಅಪ್ಪ‌ಅಮ್ಮನಿಲ್ಲದ ಮಕ್ಕಳಿಗೆ ನೀಡಲು‌ ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಇದಕ್ಕೂ ಸಕತ್​ ಟ್ರೋಲ್​ ಆಗುತ್ತಿದೆ. ಅನಾಥ ಮಕ್ಕಳಿಗೆ ಹಣ ನೀಡುವಷ್ಟು ಹಣವನ್ನು ಒಂದೇ ದಿನದಲ್ಲಿ ಬಿಗ್​ಬಾಸ್ ನೀಡುತ್ತಾ ​ ಎಂದು ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಇವರಿಗೆ ಫಂಡ್​ ಕಲೆಕ್ಟ್​ ಮಾಡುವ ಉದ್ದೇಶವಿದ್ದರೆ ಎಲ್ಲಾದ್ರೂ ಗಣೇಶ ಪೆಂಡಾಲ್​ ಕುಳಿತುಕೊಂಡು ಮೋಟಿವೇಷನ್​ ಸ್ಪೀಚ್​ ಕೊಟ್ಟರೂ ಆಗುತ್ತಿತ್ತು. ಜನರು ಖುಷಿಯಿಂದ ದುಡ್ಡು ಹಾಕುತ್ತಿದ್ದರು, ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಔಚಿತ್ಯವೇನಿತ್ತು ಎಂದು ಕೆಲವರು ಶಾಸಕನ ಕಾಲೆಳೆದಿದ್ದಾರೆ. ಇನ್ನು ಕೆಲವರು, ಇನ್ನೊಂದಿಷ್ಟು ದಿನ ಒಳಗೇ ಇದ್ದರೆ ಮತ್ತಷ್ಟು ಫಂಡ್​ ಕಲೆಕ್ಟ್​ ಆಗ್ತಿತ್ತಲ್ಲ, ಹೀಗೆ ಒಂದೇ ದಿನಕ್ಕೆ ಬಂದುಬಿಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. 

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?

ಇದೇ ವೇಳೆ, ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿರುವ ರಕ್ಷಕ್​ ಬುಲೆಟ್​ ಹಾಗೂ ಡ್ರೋನ್​ ತಯಾರಿಸುವುದಾಗಿ ಹೇಳಿ ಘಟಾನುಘಟಿಗಳನ್ನೇ ತಮ್ಮ ಮಾತುಗಳಿಂದ ಮರಳು ಮಾಡಿ ಹೀರೋ ಎನ್ನಿಸಿಕೊಂಡು ಕೊನೆಗೆ ಟುಸ್​ ಆಗಿರೋ ಡ್ರೋನ್​ ಪ್ರತಾಪ್​ ಹಾಗೂ ಶಾಸಕ ಈಶ್ವರ್​ ಪ್ರದೀಪ್​ ಅವರ ಮೀಮ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಇದರದಲ್ಲಿ ರಕ್ಷಕ್​ ಬುಲೆಟ್​, ನಂದೇ ಬಿಲ್ಡ್​ ಅಪ್​ ಅಂತಾರೆ, ಇವರೇನು ನನಗಿಂದ ಓವರ್​ ಆಗಿ ಆಡ್ತಾರೆ ಎಂದು ತ ಹೇಳಿದರೆ, ಒಂದು ಟೈಂನಲ್ಲಿ ನಾನೂ ಹೀಗೆ ಮೆರೀತಾ ಇದ್ದೆ ಎಂದು ಡ್ರೋನ್​ ಪ್ರತಾಪ್​ ಹೇಳಿದಂತೆ ಇದೆ. ಇಂಥ ನೂರಾರು ಮೀಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಪ್ರದೀಪ್​ ಅವರು ದೊಡ್ಮನೆಯಿಂದ ಹೊರಕ್ಕೆ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.

 ಇವರು ಒಳಗೆ ಹೋಗಿದ್ದ ಸಂದರ್ಭದಲ್ಲಿ ತುಕಾಲಿ ಸಂತು, ನಾವು ಒಬ್ಬ ಎಂ.ಎಲ್.ಎ ಜೊತೆ ಸ್ಪರ್ಧೆ ಮಾಡಬೇಕು ಎಂದಾಗ ಪ್ರದೀಪ್​ ಅವರು, ಎಂದು ಮಾತನಾಡಿದರೆ, ಅದಕ್ಕೆ ಪ್ರದೀಪ್, ನಾವು ಸೋಲಬೇಕು ಅಂತಾನೆ ಬೆಂಗಳೂರಿಗೆ ಬಂದವನು ಎಂದು ಉತ್ತರಿಸಿದ್ದರು. ಈಗ ಅವರು ಹೊರಕ್ಕೆ ಬರಲು ಅಸಲಿ ಕಾರಣ ಏನಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಟ್ರೋಲ್​ಗೆ ಒಳಗಾಗಿ ಅವರು ಹೊರಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ. ಅವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಮಾಜಿ ಸಚಿವ ಡಾ. ಕೆ. ಸುಧಾಕರ್ ಕಿಡಿ ಕಾರಿದ್ದರು. ಒಬ್ಬ ಎಂಎಲ್ಎ ಬಿಗ್ ಬಾಸ್​ಗೆ ಹೋದ ಉದಾಹರಣೆ ಇಲ್ಲ. ಇದು ನಗೆಪಾಟಲು ಎಂದಿದ್ದರು. ದೇಶದ ಮಟ್ಟಕ್ಕೆ ಕೊಂಡೊಯ್ದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಗುಡುಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದ್ಯಾ ಗುಂಪುಗಾರಿಕೆ; ಎಲ್ಲಾ ಕಡೆ ನೀತು ವನಜಾಕ್ಷಿ ರೌಂಡ್ಸ್!