ಸ್ಮಾರ್ಟ್‌ಫೋನ್ ಮಾರಾಟ; ಅಮೆರಿಕಾ ಹಿಂದಿಕ್ಕಿದ ಭಾರತ
ಭಾರತದಲ್ಲಿ 2019ರಲ್ಲಿ ಒಟ್ಟು 158 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳು ಶಿಪ್ಮೆಂಟ್ ಆಗಿವೆ. ಕಳೆದ ಬಾರಿಗಿಂತ 7.7 ಶೇಕಡಾ ಹೆಚ್ಚಳವಾಗಿದೆ. ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳದ್ದೇ ಪಾರುಪತ್ಯ!
ಬೆಂಗಳೂರು (ಜ.29): ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಭಾರತ ಎರಡನೇ ಸ್ಥಾನಕ್ಕೆ ಜಿಗಿದಿದೆ. ಚೀನಾ ಮೊದಲನೇ ಸ್ಥಾನದಲ್ಲಿದೆ.
ಕೌಂಟರ್‌ಪಾಯಿಂಟ್ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಭಾರತದಲ್ಲಿ 2019ರಲ್ಲಿ ಒಟ್ಟು 158 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳು ಶಿಪ್ಮೆಂಟ್ ಆಗಿವೆ. ಕಳೆದ ಬಾರಿಗಿಂತ 7.7 ಶೇಕಡಾ ಹೆಚ್ಚಳವಾಗಿದೆ.
ಇದನ್ನೂ ನೋಡಿ | ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ಟಿಕ್‌ಟಾಕ್; ವಿಡಿಯೋ ವೈರಲ್!...
ಚೀನಾದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು, ಫ್ಲಿಪ್ಕಾರ್ಟ್ ಮತ್ತು ಅಮೇಜಾನ್‌ನಂತಹ ಇ-ಕಾಮರ್ಸ್ ಸೈಟ್‌ಗಳ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮ ಪಾರುಪತ್ಯ ಮುಂದುವರಿಸಿವೆ.
ಇದನ್ನೂ ವೀಕ್ಷಿಸಿ | ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್...
"