ಒಕ್ಕಲಿಗರ ವೋಟಿಗಾಗಿ ಕಾಲ್ಪನಿಕ ಕಥೆ ಹೆಣೆದಿದೆಯಾ ಬಿಜೆಪಿ: ಜೆಡಿಎಸ್‌ಗೆ ತಲೆನೋವಾದ್ರಾ ಉರಿಗೌಡ-ನಂಜೇಗೌಡ..?

ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಲ್ಲಿರುವು, ಹೆಚ್ಚು ಗದ್ದಲವನ್ನು ಸೃಷ್ಟಿಸುತ್ತಿರುವ ವಿಷಯ ಉರಿಗೌಡ ಮತ್ತು ನಂಜೇಗೌಡ. ಮಹಾದ್ವಾರದಿಂದ ಸಿನಿಮಾ ಪೋಸ್ಟರ್ ವರೆಗೆ ಏನೆಲ್ಲ ಗದ್ದಲವಾಯ್ತು ಈ  ವಿಡಿಯೋ ನೋಡಿ
 

First Published Mar 20, 2023, 3:26 PM IST | Last Updated Mar 20, 2023, 3:32 PM IST

ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸುದ್ದಿಯಲ್ಲಿರುವು, ಹೆಚ್ಚು ಗದ್ದಲವನ್ನು ಸೃಷ್ಟಿಸುತ್ತಿರುವ ವಿಷಯ ಉರಿಗೌಡ ಮತ್ತು ನಂಜೇಗೌಡ. ಈ ಉರಿಗೌಡ ಮತ್ತು ನಂಜೇಗೌಡರ ಹೆಸರುಗಳನ್ನು ಮುಂದಿಟ್ಟುಕೊಂಡು ಪ್ರಮುಖ ಮೂರು ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಗದ್ದಲವನ್ನು ಎಬ್ಬಿಸಿವೆ. ಈ ಗದ್ದಲದಿಂದ  ಬಿಜೆಪಿಯ ಮುನಿರತ್ನ ಅವರ ಬ್ಯಾನರ್ನಲ್ಲಿ ಸಿನಿಮಾ ಆಗಲು ಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉರಿಗೌಡ ನಂಜೇಗೌಡರ ಕಥೆ ಕಾಲ್ಪನಿಕವಲ್ಲ. ಅವರು ಹೋರಾಟಗಾರರಾಗಿದ್ದರು. ಟಿಪ್ಪು ವಿರುದ್ಧ ಹೋರಾಡಿದ್ದರು. ಅವರ ಕುರಿತು ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ನಾವು ಸಿನಿಮಾ ಮಾಡಲು ಹೊರಟಿದ್ದೇವೆಂದು ಮುನಿರತ್ನ ಹೇಳಿದ್ದಾರೆ.ಹಾಗಿದ್ರೆ ಮುನಿರತ್ನ ಈ ಸಿನಿಮಾ ನಿರ್ಮಾಣ ಮಾಡುತ್ತಾರ ಅಥವಾ ಇಲ್ಲಿಗೆ ನಿಲ್ಲುತ್ತಾ ಅನ್ನುವುದನ್ನು ಈ ವಿಡಿಯೋ ನೋಡಿ.