ನಕಲಿ ಬೀಜ ಕೊಟ್ಟು ಟೋಪಿ ಹಾಕಿದ ಅಧಿಕಾರಿಗಳು; ರೈತರ ಗೋಳು ಕೇಳೋರ್ಯಾರು?
ಒಳ್ಳೆಯ ಬೆಳೆ ಬರುತ್ತದೆ ಎಂದು ರೈತರಿಗೆ ಭರವಸೆ ಮೂಡಿಸಿ ನಕಲಿ ಬಿತ್ತನೆ ಬೀಜಗಳನ್ನು ಕೊಟ್ಟು ಮೋಸ ಮಾಡಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಮಂಡ್ಯ (ಜ. 20): ನಾಡಿನ ಅನ್ನದಾತರಿಗೆ ಆಗುತ್ತಿರುವ ಮಹಾಮೋಸವಿದು. ಉತ್ತಮ ಬೆಳೆ ಬರುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿಸಿ ನಕಲಿ ಬಿತ್ತನೆ ಬೀಜಗಳನ್ನು ನೀಡಿ ಮದ್ದೂರು ತಾಲೂಕಿನ ಹಲವು ಭಾಗದ ರೈತರಿಗೆ ಆಗ್ರೋ ಏಜನ್ಸಿ ಮಾಲೀಕರೊಬ್ಬರು ಮಹಾಮೋಸ ಮಾಡಿದ್ದಾರೆ.
ಮೊದಲ ಪೂಜೆಗಾಗಿ ದೇವರ ಮುಂದೆಯೇ ಕಿತ್ತಾಡ್ಕೊಂಡ BJP, JDS ಮುಖಂಡರು..!
ಕೃಷಿ ಇಲಾಖೆ ಬಿತ್ತನೆ ಬೀಜ ನೀಡುವುದು ವಿಳಂಬ ಮಾಡಿದ್ದರಿಂದ ಕಳೆದ ಜುಲೈನಲ್ಲಿ ಮಂಡ್ಯದ ಮಂಜುನಾಥ ಏಜನ್ಸಿಯವರ ಬಳಿ ಬಿತ್ತನೆ ಬೀಜ ತೆಗೆದುಕೊಂಡು ಬಿತ್ತನೆ ಮಾಡಿದ್ದಾರೆ.
ಮಂಡ್ಯದಲ್ಲಿ ಮತ್ತೆ ಒಂದಾದ ಜೋಡೆತ್ತು; ಗೋಮಾತೆ ಸೇವೆಗೆ ಮುಂದಾದ ದರ್ಶನ್, ಯಶ್
ಬೆಳೆ ಕಟಾವಿಗೆ ಬಂದ ನಂತರ ರೈತರು ಕಂಗಾಲಾಗಿದ್ದಾರೆ. ತೆನೆ ಒಡೆದು ಕಾಳು ಕಟ್ಟುವ ಸಂದರ್ಭದಲ್ಲಿ ಕಾಳು ಕಟ್ಟಿರದೇ ಸಂಪೂರ್ಣ ಬೆಳೆ ಜೊಳ್ಳಾಗಿದೆ. ಒಳ್ಳೆಯ ತಳಿಯ ಬೀಜವೆಂದು ನಕಲಿ ತಳಿಯ ಬೀಜವನ್ನು ರೈತರಿಗೆ ಕೊಟ್ಟು ಅಧಿಕಾರಿಗಳು ಟೋಪಿ ಹಾಕಿದ್ದಾರೆ. ಏನಿದು ಅವಾಂತರ? ಸಂಬಂಧಪಟ್ಟ ಅಧಿಕಾರಿಗಳು ಏನಂತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ!