ಮಂಡ್ಯದಲ್ಲಿ ಪುತ್ಥಳಿ ಪಾಲಿಟಿಕ್ಸ್, ಲಿಂಗಾಯತ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ಸರ್ಕಸ್ ..!
ಬೆಳಗಾವಿ ಬಳಿಕ ಮಂಡ್ಯದಲ್ಲಿ ಪುತ್ಥಳಿ ಪಾಲಿಟಿಕ್ಸ್ ಜೋರಾಗಿದ್ದು, ಲಿಂಗಾಯತ ಸಮುದಾಯದ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ಸರ್ಕಸ್ ಮಾಡುತ್ತಿದೆ.
ಬೆಳಗಾವಿ ಬಳಿಕ ಮಂಡ್ಯದಲ್ಲಿ ಪುತ್ಥಳಿ ಪಾಲಿಟಿಕ್ಸ್ ಜೋರಾಗಿದ್ದು, ಲಿಂಗಾಯತ ಸಮುದಾಯದ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ಸರ್ಕಸ್ ಮಾಡುತ್ತಿದೆ. ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದಲ್ಲಿ ಪುತ್ಥಳಿ ರಾಜಕೀಯ ಆರಂಭವಾಗಿದ್ದು, ಒಂದೇ ಗ್ರಾಮದಲ್ಲಿ ಇಬ್ಬರು ಮಹನೀಯರ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಪೈಪೋಟಿ ಮೇಲೆ ಪುತ್ಥಳಿ ಅನಾವರಣ ಮಾಡಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಅಂದು ಶಿವಕುಮಾರ್ ಸ್ವಾಮೀಜಿ ಪುತ್ಥಳಿ ಇಂದು ಬಸವೇಶ್ವರರ ಪುತ್ಥಳಿ ಅನಾವರಣ ಮಾಡಲಾಗುತ್ತಿದೆ. ಅಂದು ಬಿಜೆಪಿಯ ಡಾ. ಇಂದ್ರೇಶ್ ನೇತೃತ್ವದಲ್ಲಿ ಶಿವಕುಮಾರ್ ಶ್ರೀ ಪುತ್ಥಳಿನಿರ್ಮಾಣ ಮಾಡಲಾಗಿತ್ತು. ಫೆ,21 ರಂದು ವಿಜಯೇದ್ರರಿಂದ ಶಿವಕುಮಾರ್ ಶ್ರೀ ಪುತ್ಥಳಿ ಅನಾವರಣ ಮಾಡಿರು. ಇಂದು ಪುಟ್ಟರಾಜು ಬೆಂಬಲಿಗರಿಂದ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಲಿದ್ದು ಕುಮಾರಸ್ವಾಮಿ ಇದನ್ನು ಅನಾವರಣಮಾಡಲಿದ್ದಾರೆ.