ಬಾಂಗ್ಲಾ ವಲಸಿಗರ ತಡೆಗೆ ಅಗ್ರಹ: ಕೆ. ಆರ್. ಪೇಟೆ ಬಂದ್‌ಗೆ ವ್ಯಾಪಕ ಬೆಂಬಲ
ಬಾಂಗ್ಲಾ ವಲಸಿಗರ ತಡೆಗೆ ಆಗ್ರಹಿಸಿ ಕೆ. ಆರ್. ಪೇಟೆ ಹಿಂದೂ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕರೆ ನೀಡಿರುವ ಬಂದ್‌ಗೆ ವ್ಯಾಪಕ ಬಂಬಲ ವ್ಯಕ್ತವಾಗಿದೆ. PFI ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ, ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮಂಡ್ಯ(ಅ.31): ಬಾಂಗ್ಲಾ ವಲಸಿಗರ ತಡೆಗೆ ಆಗ್ರಹಿಸಿ ಕೆ. ಆರ್. ಪೇಟೆ ಹಿಂದೂ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕರೆ ನೀಡಿರುವ ಬಂದ್‌ಗೆ ವ್ಯಾಪಕ ಬಂಬಲ ವ್ಯಕ್ತವಾಗಿದೆ. PFI ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ, ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಂಗಡಿ ಮುಂಗಟ್ಟು ಮುಚ್ಚಿ ವರ್ತಕರು, ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಹಿಂದೂ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸುವ ಮೂಲಕ ಬಂದ್ ಯಶಸ್ವಿಗೆ ಸಹಕರಿಸಲು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ತಹಸೀಲ್ದಾರ್ ಶಿವಮೂರ್ತಿ ನಿನ್ನೆಯೇ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸುಂತೆ ಆದೇಶ ನೀಡಿದ್ದಾರೆ. ಸಾರಿಗೆ, ಆಟೋ ಸಂಚಾರ ಎಂದಿನಂತೆ ನಡೆಯುತ್ತಿದೆ. ಅ.27ರಂದು 16 PFI ಕಾರ್ಯಕರ್ತರನ್ನು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿಕಾವಲು ಬಳಿ ಅನುಮತಿ ಇಲ್ಲದೆ ಬಂಧಿಸಲಾಗಿತ್ತು.