ಮಕ್ಕಳು ಯಾವಾಗ್ಲೂ ಮಂಕಾಗಿ ಇರ್ತಾರೆ ಅನ್ಬೇಡಿ, ಪೋಷಕರು ಮಾಡೋ ಇಂಥಾ ತಪ್ಪೇ ಅದಕ್ಕೆ ಕಾರಣ!

ಇವತ್ತಿನ ದಿನಗಳಲ್ಲಿ ಬಹುತೇಕ ಮಕ್ಕಳನ್ನು ನೋಡಿ ಯಾವಾಗ್‌ ನೋಡಿದ್ರೂ ಮೊಬೈಲ್‌ನಲ್ಲಿ ವೀಡಿಯೋ ನೋಡ್ತಿರ್ತಾರೆ. ಅಥವಾ ಟಿವಿ, ಕಂಪ್ಯೂಟರ್‌ನಲ್ಲಿ ಕಾರ್ಟೂನ್ಸ್ ನೋಡ್ತಾರೆ. ಆದ್ರೆ ಇದು ಮಕ್ಕಳ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿ ಮಾಡುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

Share this Video
  • FB
  • Linkdin
  • Whatsapp

ಮಗ, ಮಗಳು ಏನೇನೂ ಚುರುಕಿಲ್ಲ. ಯಾವಾಗ್ ನೋಡಿದ್ರೂ ಡಲ್ ಆಗಿರ್ತಾರೆ. ಆಟ-ಪಾಠ ಯಾವುದರಲ್ಲೂ ಇಂಟ್ರೆಸ್ಟ್ ಇಲ್ಲ ಅಂತ ಕೆಲ ಪೋಷಕರು ಹೇಳೋದನ್ನು ನೀವು ಕೇಳಿರಬಹುದು. ಆದರೆ ಇದಕ್ಕೆಲ್ಲಾ ಪೋಷಕರು ಮಾಡೋ ತಪ್ಪೇ ಕಾರಣವಾಗ್ತಿದೆ ಅನ್ನೋದು ನಿಮಗೆ ಗೊತ್ತಿದ್ಯಾ ? ಪೋಷಕರು ಮಕ್ಕಳ ಲಾಂಗ್ವೇಜ್ ಇಂಪ್ರೂವ್ ಆಗ್ಲಿ ಅಂತ ಮೊಬೈಲ್ ಕೊಟ್ಟು, ಮಕ್ಕಳು ಕಲೀಲಿ ಬಿಡಿ ಅಂತಾರೆ. ಮತ್ತೆ ಕೆಲವರು ಟ್ಯಾಬ್ಲೆಟ್‌ ಕೊಟ್ಟು ಬಿಡ್ತಾರೆ. ಒಟ್ನಲ್ಲಿ ಮಕ್ಕಳ ಸುತ್ತಮುತ್ತ ಗ್ಯಾಜೆಜ್ಟ್ಸ್ ಅಂತೂ ಇದ್ದೇ ಇರುತ್ತೆ. ಆದ್ರೆ ಈ ರೀತಿ ಮಕ್ಕಳ ಕಲಿಕೆಗೆ ಗ್ಯಾಜೆಟ್ಸ್ ಕೊಡೋದ್ರಿಂದ ಮಕ್ಕಳು ದಿನೇ ದಿನೇ ಮಂಕಾಗ್ತಾರೆ ಅಂತಾರೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ. ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊಬೈಲ್‌ಗಾಗಿ ಹಠ ಹಿಡಿಯೋ ಮಕ್ಕಳ ಅಭ್ಯಾಸ ಬಿಡಿಸೋಕೆ ಸಿಂಪಲ್ ಟಿಪ್ಸ್‌

Related Video