ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!

ಬೈಕ್ ಮೇಲೆ ಹೊರಟ ಶ್ವಾನ ಮಹಾರಾಜ/ ಹೆಲ್ಮೆಟ್ ಇಲ್ಲದೇ ಸಾಕು ಪ್ರಾಣಿ/  ಬೈಕ್ ಮೇಲೆ ನಾಯಿಯ ಕರೆದುಕೊಂಡು ಲಾಂಗ್ ಡ್ರೈವ್/ ನೋಡಿದ ಜನರಿಗೆ ಒಂದು ಕ್ಷಣ ಗಾಬರಿ

Share this Video
  • FB
  • Linkdin
  • Whatsapp

ಬೆಂಗಳೂರು(ಜ. 23) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶ್ವಾನ ಪ್ರಿಯರಿಗೇನು ಕಡಿಮೆ ಇಲ್ಲ...ತಾವು ಸಾಕಿರೋ ನಾಯಿ ಅಂದ್ರೆ ಅವರೆಗೆ ಅಚ್ಚುಮೆಚ್ಚು , ಬೆಳಗ್ಗೆ ಸಂಜೆ ಎನ್ನದ್ದೇ ನಾಯಿಗಳನ್ನ ವಾಕ್ ಗೆ ಕರೆದುಕೊಂಡು ಹೋಗುವುದು ವಾಡಿಕೆ ಅವರಿಗೆ..ಆದ್ರೆ ಇತ್ತೀಚಿಗೆ ನಾಯಿಗಳನ್ನ ಲಾಂಗ್ ಡ್ರೈವ್ ಕರೆದುಕೊಂಡು ಹೋಗೊದ್ ಒಂದು ಫ್ಯಾಷನ್ ಆಗ್ತಿದೆ....ತಮ್ಮ ನೆಚ್ಚಿನ ನಾಯಿಗಳನ್ನ ಕಾರುಗಳನ್ನ‌ ಲಾಂಗ್ ಡ್ರೈವ್ ಕರೆದುಕೊಂಡು ಹೋಗೊದು ಇದೀಗ ಫ್ಯಾಷನ್ ಇದ್ರ ಜೊತೆಗೆ ಈಗ ಮತ್ತೊಂದು ಫ್ಯಾಷನ್ ಸೇರ್ಪಡೆಯಾಗಿದೆ ಅದು ತಮ್ಮ ಬೈಕ್ ನಲ್ಲಿ ಹಿಂಬದಿಯಲ್ಲಿ ನಾಯಿಗಳನ್ನ ಕುರಿಸಿಕೊಂಡು ಲಾಂಗ್ ಡ್ರೈವ್ ಹೋಗುತ್ತಾರೆ.

Add Asianetnews Kannada as a Preferred SourcegooglePreferred

ಮಂಗಳೂರಿನ ಬಾಂಬ್ ಪತ್ತೆ ಹಚ್ಚಿದ ಶ್ವಾನಕ್ಕೊಂದು ಸಲಾಂ ಹೇಳಿ

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಟೂವೀಲರ್ ಒಂದರಲ್ಲಿ ನಾಯಿಯನ್ನ‌ ಹಿಂಬದಿಯಲ್ಲಿ ಕುರಿಸಿಕೊಂಡು ಹೋಗ್ತಿರೋದು ಎಲ್ಲರ ಕಣ್ಣಿಗೆ ಬಿದ್ದಿದೆ...ಯಾವುದೇ ಅಂಜಿಕೆ ಇಲ್ದೇ ಬೈಕ್ ಹಿಂಬದಿಯಲ್ಲಿ ನಾಯಿ ಕೂತಿರೋದನ್ನ ನೋಡಿ ಎಲ್ಲರಿಗೂ ಆಶ್ಚರ್ಯ...ನಾಯಿ ಹಿಂಬದಿಯಲ್ಲಿ ಕೂತಿರೋದನ್ನ ನೋಡಿ ಕೆಲವರು ಖುಷಿ ಪಟ್ಟರೆ
ಇನ್ನೂ ಕೆಲವರು ನಾಯಿಗೂ ಹೆಲ್ಮೆಟ್ ಇಲ್ಲ ನಾಯಿ ಮಾಲಿಕನಿಗೂ ಹೆಲ್ಮೆಟ್ ಇಲ್ಲ ಗೊಣಗಿಕೊಂಡರು. ಫಸ್ಟ್ ನಾಯಿ ಮಾಲೀಕನಿಗೊಂದು ಹೆಲ್ಮೆಟ್ ಕೊಡಸಿಬೇಕಿದೆ ಅಂತಿದ್ದರು.

Related Video