ಬೆಂಗಳೂರಲ್ಲಿ ಏನ್ ಮುಟ್ಟಿದ್ರೂ ಶಾಕ್ ಹೊಡೆದ ಅನುಭವ ಆಗ್ತಿದ್ಯಲ್ಲಾ, ಯಾಕ್ಹೀಗೆ ?
ವಿದ್ಯುತ್ ಮುಟ್ಟಿದಾಗ ಶಾಕ್ ಹೊಡೆಯೋ ಬಗ್ಗೆ ನೀವೆಲ್ಲಾ ಕೇಳಿರ್ತೀರಾ..ಆದ್ರೆ ಮನುಷ್ಯನನ್ನು ಮುಟ್ಟಿದಾಗ, ವಸ್ತುಗಳನ್ನು ಮುಟ್ಟಿದಾಗ ಶಾಕ್ ಆಗೋ ಬಗ್ಗೆ ಕೇಳಿದ್ದೀರಾ? ಸದ್ಯ ಬೆಂಗಳೂರಲ್ಲಿ ಆಗ್ತಿರೋದು ಅದೇ. ಜನರೆಲ್ಲರೂ ಈ ಪಟ್ಟಣಕ್ಕೆ ಏನಾಗಿದೆ ಎಂದು ಮಾತನಾಡಿಕೊಳ್ತಿದ್ದಾರೆ.
ಬೆಂಗಳೂರು ಜನತೆ ಕೆಲ ದಿನಗಳಿಂದ ಈ ವಿಚಿತ್ರ ಕರೆಂಟ್ ಶಾಕ್ ಅನುಭವಿಸುತ್ತಿದ್ದಾರೆ. ಇತರರನ್ನು ಸ್ಪರ್ಶಿಸಿದಾಗ, ಚೇರ್ ಮುಟ್ಟಿದಾಗ, ಇನ್ಯಾವುದೋ ಕಬ್ಬಿಣದ ಕಂಬಿ ಮುಟ್ಟಿದಾಗ ಶಾಕ್ ಹೊಡೆದಂತೆ ಆಗುತ್ತಿದೆ. ಮೊದಲೆಲ್ಲಾ ಹೀಗೆಲ್ಲಾ ತಮಗೆ ಮಾತ್ರ ಆಗ್ತಿದೆ ಅಂದ್ಕೊಂಡವರು ನಂತರ ಎಲ್ಲರೂ ಹೀಗೆ ಹೇಳುತ್ತಿರುವುದನ್ನು ಕೇಳಿ ಬೆರಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಎಲ್ಲೆಡೆ ಬೆಂಗಳೂರು ನಿವಾಸಿಗಳಲ್ಲಿ ಇದೇ ವಿಷಯ ಚರ್ಚೆಗೆ ಗ್ರಾಸವಾಗಿದೆ. ಯಾಕೆ ಹೀಗಾಗ್ತಿದೆ ? ಇದರ ಹಿಂದಿರೋ ಕಾರಣವೇನು ? ಈ ಬಗ್ಗೆ ನ್ಯಾಷನಲ್ ಕಾಲೇಜ್‌ನ ಬಿವಿ ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಕೆ ಎಸ್ ನಟರಾಜ್ ಏನ್ ಹೇಳ್ತಾರೆ ತಿಳಿಯೋಣ.
ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!