MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!

ಕರೆಂಟ್ ಶಾಕ್ ಹೊಡದರೆ ಬೆಚ್ಚಿ ಬೀಳಬೇಡಿ, ಜೀವ ಉಳಿಸಲು ಹೀಗ್ ಮಾಡಿ!

ನಿಮ್ಮ ಮುಂದೆ ಯಾರಾದರೂ ವಿದ್ಯುತ್ ಆಘಾತಕ್ಕೆ ಒಳಗಾದರೆ, ಪ್ರಥಮ ಚಿಕಿತ್ಸೆಯಾಗಿ ನೀವು ಏನು ಮಾಡಬೇಕು? ಇದರ ಬಗ್ಗೆ ಮಾಹಿತಿಯನ್ನು ಇಟ್ಟು ಕೊಳ್ಳುವುದು ತುಂಬಾ ಮುಖ್ಯ, ಇದರಿಂದ ನಿಮಗೂ ವಿದ್ಯುತ್ ಆಘಾತವಾಗುವುದಿಲ್ಲ ಮತ್ತು ಗಾಯಗೊಂಡ ವ್ಯಕ್ತಿಯ ಜೀವವನ್ನು ನೀವು ಉಳಿಸಬಹುದು.

2 Min read
Suvarna News
Published : Dec 12 2022, 01:13 PM IST| Updated : Dec 13 2022, 10:38 AM IST
Share this Photo Gallery
  • FB
  • TW
  • Linkdin
  • Whatsapp
19

ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಟಿಕೆಟ್ ಪರೀಕ್ಷಕರೊಬ್ಬರು ಪ್ಲಾಟ್‌ಫಾರ್ಮಿನಲ್ಲಿ ನಿಂತಿದ್ದರು, ಆ ಕ್ಷಣದಲ್ಲೇ ಅವರು ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಆಘಾತಕ್ಕೆ (electric shock) ಒಳಗಾಗುತ್ತಾರೆ. ಅದರ ನಂತರ ರೈಲ್ವೆ ಹಳಿಯ ಮೇಲೆ ಪ್ರಜ್ಞಾಹೀನನಾಗಿ ಬೀಳುತ್ತಾರೆ. ಪಶ್ಚಿಮ ಬಂಗಾಳದ ಖರಗ್ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ಎನ್ನಲಾಗುತ್ತಿದೆ. ವರದಿ ಪ್ರಕಾರ, ಗಾಯಗೊಂಡ ಟಿಟಿಇ ಈಗ ಅಪಾಯದಿಂದ ಪಾರಾಗಿದ್ದಾರೆ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

29

ವಿದ್ಯುತ್ ಆಘಾತ ಉಂಟಾಗುತ್ತಿರುವುದು ಇದೇ ಮೊದಲಲ್ಲ. ಇದು ಅನೇಕ ಬಾರಿ ಕಂಡು ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮುಂದೆ ಯಾರಿಗಾದರೂ ವಿದ್ಯುತ್ ಆಘಾತವಾದರೆ, ತಕ್ಷಣವೇ ಹೇಗೆ ಸಹಾಯ ಮಾಡಬೇಕು ಮತ್ತು ಯಾವ ವಿಷಯಗಳನ್ನು ನೋಡಿಕೊಳ್ಳಬೇಕು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ. 

39
ವಿದ್ಯುತ್ ಆಘಾತ ಉಂಟಾದಾಗ ಏನು ಮಾಡಬೇಕು?

ವಿದ್ಯುತ್ ಆಘಾತ ಉಂಟಾದಾಗ ಏನು ಮಾಡಬೇಕು?

ದೇಹವು ವಿದ್ಯುತ್‌ನ ಉತ್ತಮ ವಾಹಕ. ಆದ್ದರಿಂದ ವಿದ್ಯುತ್ ಸಂಪರ್ಕ ಹೊಂದಿರುವ ವ್ಯಕ್ತಿಯನ್ನು ಸ್ಪರ್ಶಿಸಿದರೆ, ನಿಮ್ಮ ದೇಹದ ಮೂಲಕ ವಿದ್ಯುತ್ ಪ್ರವಹಿಸುತ್ತದೆ. ಆಘಾತ ಎದುರಿಸಬೇಕಾಗುತ್ತದೆ. ವಿದ್ಯುತ್ ಆಘಾತ ಎಷ್ಟು ತೀವ್ರವಾಗಿದೆ ಎಂಬುದು, ಯಾವ ರೀತಿಯ ವಿದ್ಯುತ್ ಪ್ರವಾಹ ಮತ್ತು ವೋಲ್ಟೇಜ್ (voltage) ಅನ್ನು ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

49

ವಿದ್ಯುತ್ ಆಘಾತ ಗಂಭೀರ ರೀತಿಯಲ್ಲಿ ಹಾನಿಯನ್ನುಂಟು ಮಾಡಬಹುದು ಮತ್ತು ಮಾರಣಾಂತಿಕವಾಗಿಯೂ ಕಾಡಬಹುದು. ಇದು ಹೃದಯ ಸ್ತಂಭನವನ್ನು (heart failure) ಉಂಟು ಮಾಡುವ ಮೂಲಕ ದೇಹದಲ್ಲಿ ಗಂಭೀರ ಹಾನಿ ಉಂಟುಮಾಡಬಹುದು. ಹಾಗಿದ್ರೆ ವಿದ್ಯುತ್ ಆಘಾತ ಉಂಟಾದ ಸಂದರ್ಭದಲ್ಲಿ ಏನು ಮಾಡಬಹುದು ಅನ್ನೋದನ್ನು ನೋಡೋಣ.

59
ವೈದ್ಯಕೀಯ ತುರ್ತುಸ್ಥಿತಿಯು ಯಾವಾಗ ಸಂಭವಿಸುತ್ತದೆ?

ವೈದ್ಯಕೀಯ ತುರ್ತುಸ್ಥಿತಿಯು ಯಾವಾಗ ಸಂಭವಿಸುತ್ತದೆ?

ವಿದ್ಯುತ್ ಸ್ಪರ್ಷದಿಂದ ವ್ಯಕ್ತಿ ಗಾಯಗೊಂಡಿದ್ದರೆ, ವೈದ್ಯಕೀಯ ತುರ್ತು ಸೇವೆಗೆ (Emergency Medical Call) ಕರೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು.  
ತುರ್ತು ಪರಿಸ್ಥಿತಿ ಯಾವಾಗ ಸಂಭವಿಸುತ್ತೆ?
ದೇಹದ ಮೇಲೆ ತೀವ್ರವಾದ ಸುಟ್ಟ ಗಾಯ ಉಂಟಾದಾಗ
ವ್ಯಕ್ತಿಯು ಗೊಂದಲಕ್ಕೊಳಗಾಗಿರುವಾಗ
ಉಸಿರಾಟದ ತೊಂದರೆ ಸಂಭವಿಸಿದರೆ (breathing problem)
ಹೃದಯ ಬಡಿತವು ನಿಧಾನಗೊಂಡಿದೆ ಅಥವಾ ವೇಗಗೊಂಡಿದ್ದರೆ
ಹೃದಯ ಸ್ತಂಭನ ಅಥವಾ ಹೃದಯಾಘಾತ
ಸ್ನಾಯು ನೋವು ಅಥವಾ ಬಿಗಿತ
ಸೆಳೆತಗಳು ಸಂಭವಿಸುತ್ತವೆ
ಅಪ್ರಜ್ಞಾಪೂರ್ವಕವಾಗುತ್ತದೆ

69
ಯಾರಾದರೂ ವಿದ್ಯುದಾಘಾತಕ್ಕೊಳಗಾದರೆ ಅವರಿಗೆ ಹೇಗೆ ಸಹಾಯ ಮಾಡಬಹುದು?

ಯಾರಾದರೂ ವಿದ್ಯುದಾಘಾತಕ್ಕೊಳಗಾದರೆ ಅವರಿಗೆ ಹೇಗೆ ಸಹಾಯ ಮಾಡಬಹುದು?

ನಿಮ್ಮ ಎದುರಿಗಿರುವ ಯಾರಿಗಾದರೂ ವಿದ್ಯುತ್ ಆಘಾತವಾದಾಗಲೆಲ್ಲಾ, ತಕ್ಷಣವೇ ವೈದ್ಯಕೀಯ ತುರ್ತು ಸೇವೆಗೆ (emergency call)ಮಾಡಿ:

ವಿದ್ಯುತ್ ತಂತಿಯನ್ನು ಸ್ಪರ್ಶಿಸಬೇಡಿ ಅಥವಾ ಕೈಗಳಿಂದ ನೇರವಾಗಿ ವಿದ್ಯುತ್ ಪ್ರವಾಹವು ಎಲ್ಲಿದೆ ಎಂದು ಹುಡುಕಾಡಬೇಡಿ. ಇದು ನೀವು ವಿದ್ಯುದಾಘಾತಕ್ಕೆ ಒಳಗಾಗುವಂತೆ ಮಾಡಬಹುದು. 
ವಿದ್ಯುದಾಘಾತಕ್ಕೊಳಗಾದ ವ್ಯಕ್ತಿಯನ್ನು ಅಲುಗಾಡಿಸಬೇಡಿ.

79

ವಿದ್ಯುತ್ ಎಲ್ಲಿಂದ ಬಂತು, ಆ ಮೂಲವನ್ನು ಆಫ್ (switch of the main board) ಮಾಡಲು ಪ್ರಯತ್ನಿಸಿ. ಇದು ಸಾಧ್ಯವಾಗದಿದ್ದರೆ, ಒಂದು ಕೋಲಿನ ಸಹಾಯದಿಂದ ಆ ವ್ಯಕ್ತಿಯಿಂದ ಆ ತಂತಿಯನ್ನು ತೆಗೆದುಹಾಕಿ.
ವ್ಯಕ್ತಿಯು ವಿದ್ಯುತ್ ತಂತಿಯಿಂದ ದೂರವಾದ ನಂತರ, ಅವನ ಉಸಿರನ್ನು ಪರೀಕ್ಷಿಸಿ ಮತ್ತು ಹೃದಯ ಬಡಿತವಿದೆಯೇ ಅಥವಾ ಇಲ್ಲವೇ ಎಂದು ನೋಡಿ.

89

ಆಘಾತದ ಚಿಹ್ನೆಗಳಿದ್ದರೆ, ಆ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ. ಅವನ ಕಾಲುಗಳನ್ನು ಮೇಲೆತ್ತಲು ಪ್ರಯತ್ನಿಸಿ ಮತ್ತು ತಲೆಯನ್ನು ಮುಂಡದ ಕೆಳಗೆ ಸ್ವಲ್ಪ ಕೆಳಗಿಡಲು ಪ್ರಯತ್ನಿಸಿ.
ವ್ಯಕ್ತಿಯು ಉಸಿರಾಟದ ತೊಂದರೆ, ಮೂರ್ಛೆ ಹೋಗುವುದು, ಸೆಳೆತ, ಸ್ನಾಯು ನೋವು ಅಥವಾ ಇನ್ನಿತರ ಸಮಸ್ಯೆ ಹೊಂದಿದ್ದರೆ ಅಥವಾ ಹೃದಯ ಬಡಿತವು (heartbeat) ವೇಗವಾಗಿದ್ದರೆ, ಸಾಧ್ಯವಾದಷ್ಟು ಬೇಗ ವೈದ್ಯಕೀಯ ಸಹಾಯ ಪಡೆಯಿರಿ.

99

ವ್ಯಕ್ತಿಯು ಉಸಿರಾಟ, ಕೆಮ್ಮು ಅಥವಾ ಯಾವುದೇ ರೀತಿಯ ಚಲನೆಯನ್ನು ತೋರಿಸದಿದ್ದರೆ, ಸಿಪಿಆರ್ ಅನ್ನು ಪ್ರಾರಂಭಿಸಿ.
ಗಾಯಗೊಂಡ ವ್ಯಕ್ತಿಯ ದೇಹವನ್ನು ತಂಪಾಗಿಸಲು ಪ್ರಯತ್ನಿಸಬೇಡಿ.
ಸುಟ್ಟಗಾಯಗಳು ಇರುವ ಸ್ಥಳಗಳಲ್ಲಿ ಬ್ಯಾಂಡೇಜ್‌ಗಳು ಅಥವಾ ಔಷಧಿಗಳನ್ನು ಹಚ್ಚಿ. ಕಂಬಳಿ ಅಥವಾ ಸಾಕ್ಸ್ ಬಳಸಬೇಡಿ, ಏಕೆಂದರೆ ಅದರ ಎಳೆಗಳು ಸುಟ್ಟ ಚರ್ಮಕ್ಕೆ (burnt skin) ಅಂಟಿಕೊಳ್ಳಬಹುದು.

About the Author

SN
Suvarna News
ಅಪಘಾತ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved