ಗವಿಸಿದ್ದೇಶ್ವರ ಜಾತ್ರೆ: ಪೌರ ಕಾರ್ಮಿಕರಿಗೆ ಊಟ ಬಡಿಸಿ ಸರಳತೆ ಮೆರೆದ ಶ್ರೀಗಳು

ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವಚ್ಚತಾ ಕೆಲಸ ಮಾಡಿದ ಪೌರ ಕಾರ್ಮಿಕರಿಗೆ ಸ್ವಾಮೀಜಿಗಳು ಉಪಹಾರ  ಉಣ ಬಡಿಸಿದ್ದಾರೆ. ಕೊಪ್ಪಳ ಗವಿಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಪೌರ ಕಾರ್ಮಿಕರ ಕೆಲಸ ಮೆಚ್ಚಿ ತಾವೇ ಸ್ವತಃ ಉಪಹಾರ ಬಡಿಸಿ ಸರಳತೆ ಮೆರದಿದ್ದಾರೆ. 
 

First Published Jan 16, 2020, 4:26 PM IST | Last Updated Jan 16, 2020, 4:26 PM IST

ಕೊಪ್ಪಳ (ಜ. 16):  ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆ ಯಲ್ಲಿ ಸ್ವಚ್ಚತಾ ಕೆಲಸ ಮಾಡಿದ ಪೌರ ಕಾರ್ಮಿಕರಿಗೆ ಸ್ವಾಮೀಜಿಗಳು ಉಪಹಾರ  ಉಣ ಬಡಿಸಿದ್ದಾರೆ. ಕೊಪ್ಪಳ ಗವಿಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಪೌರ ಕಾರ್ಮಿಕರ ಕೆಲಸ ಮೆಚ್ಚಿ ತಾವೇ ಸ್ವತಃ ಉಪಹಾರ ಬಡಿಸಿ ಸರಳತೆ ಮೆರದಿದ್ದಾರೆ. 

ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!

ಕಳೆದ ಒಂದು ವಾರದಿಂದ ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡಿದ ಪೌರ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಶ್ರೀಗಳೇ ಬಂದು ಉಪಹಾರ ಬಡಿಸಿದ್ದು ಕಂಡು ಪೌರ ಕಾರ್ಮಿಕರ ಖುಷಿಗೆ ಪಾರವೇ ಇರಲಿಲ್ಲ. ಸುಮಾರು ಮೂವತ್ತಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಉಪಹಾರ ಬಡಿಸಿ ಶ್ರೀಗಳು ಸರಳತೆ ಮೆರದಿದ್ದಾರೆ‌. ಆ ವಿಡಿಯೋ ಇಲ್ಲಿದೆ ನೋಡಿ.