ಪೊಲೀಸರಿಗೆ ಒಳ್ಳೆ ಊಟ ಕೊಟ್ರೆ ಗುಡ್ಡವನ್ನೇ ಕಿತ್ತಿಡ್ತಾರೆ: ರವಿ ಚೆನ್ನಣ್ಣನವರ್

ನಮ್ಮ ಕೆಳಹಂತದ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಂಡರೆ, ಅವರನ್ನು ಗೌರವಿಸಿದರೆ ಗುಡ್ಡವನ್ನೇ ತಂದು ರೋಡಿಗಿಡುತ್ತಾರೆ. ಒಳ್ಳೆಯವರಿಗೆ ನಾವು ಬಹಳ ಒಳ್ಳೆಯರು, ಕೆಟ್ಟವರಿಗೆ ಕೆಟ್ಟವರು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರು ಸುರಕ್ಷಿತ ಕೈಗಳಲ್ಲಿದ್ದೀರಿ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ.ಚೆನ್ನಣ್ಣನವರ್  ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಕೊಪ್ಪಳ (ಜ. 17): ಒಂದು ಸ್ವಸ್ಥ ಸಮಾಜ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. 7 ಕೋಟಿ ಜನಸಂಖ್ಯೆಗೆ ಬರೀ 1 ಲಕ್ಷ 15 ಸಾವಿರ ಜನ ಪೊಲೀಸರಿದ್ದೇವೆ. ಎಲ್ಲವನ್ನು ನಮ್ಮಿಂದ ನಿರೀಕ್ಷೆ ಮಾಡಬೇಡಿ. ನಿಮ್ಮ ಕಣ್ನೆದುರು ನಡೆಯುವ ಅಪರಾಧ ತಡೆಯುವ ಮನೋಭಾವ ಬರಲಿ. ಮೊದಲು ಸಾಕ್ಷಿ ಹೇಳಲು ಪೊಲೀಸ್ ಸ್ಟೇಷನ್‌ಗೆ ಬನ್ನಿ ಎಂದು ಗವಿ ಸಿದ್ದೇಶ್ವರ ಜಾತ್ರಾ ಮೋಹೋತ್ಸವದಲ್ಲಿ ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ.ಚೆನ್ನಣ್ಣನವರ್ ಹೇಳಿದ್ದಾರೆ. 

ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ

ನನ್ನ ಕೆಳಹಂತದ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಂಡರೆ, ಅವರನ್ನು ಗೌರವಿಸಿದರೆ ಗುಡ್ಡವನ್ನೇ ತಂದು ರೋಡಿಗಿಡುತ್ತಾರೆ ಎಂದಿದ್ದಾರೆ. ಒಳ್ಳೆಯವರಿಗೆ ನಾವು ಬಹಳ ಒಳ್ಳೆಯರು, ಕೆಟ್ಟವರಿಗೆ ಕೆಟ್ಟವರು ಎಂದು ಹೇಳಿದ್ದಾರೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರು ಸುರಕ್ಷಿತ ಕೈಗಳಲ್ಲಿದ್ದೀರಿ ಎಂದು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. 

Related Video