ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ
ಗವಿಮಠದ ಮೈದಾನ ಸ್ವಚ್ಛಗೊಳಿಸಿ ಕೊಪ್ಪಳ ಎಸ್‌ಪಿ ಸಂಗೀತಾ| ಸಿಬ್ಬಂದಿಯೊಂದಿಗೆ ಪೊರಕೆ ಹಿಡಿದು ಕಸಗೂಡಿಸಿದ ಮಹಿಳಾ ಪೊಲೀಸ್ ಅಧಿಕಾರಿ| ಎಸ್‌ಪಿ ಕಾರ್ಯಕ್ಕೆ ಜಿಲ್ಲಾದ್ಯಂತ ಭಾರಿ ಮೆಚ್ಚುಗೆ|
ಕೊಪ್ಪಳ(ಜ.17): ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಮಠದ ಜಾತ್ರೆಯಲ್ಲಿ ಎಸ್‌ಪಿ ಸಂಗೀತಾ ಅವರು ಜಾತ್ರೆಯನ್ನ ಅಂಗಳವನ್ನ ಸ್ವಚ್ಛಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಜೊತೆ ಅಂಗಳವನ್ನ ಸ್ವಚ್ಛಗೊಳಿಸಿದ್ದಾರೆ. ಜಾತ್ರೆಯ ದಿನದಂದು ಸುಮಾರು 5 ರಿಂದ 6 ಲಕ್ಷ ಜನರು ಭಾಗವಹಿಸಿದ್ದರು. ಹೀಗಾಗಿ ಎಸ್‌ಪಿ ಸಂಗೀತಾ ಅವರು ಸ್ವಯಂ ಪ್ರೇರಿತರಾಗಿ ತಮ್ಮ ಸಿಬ್ಬಂದಿ ಜೊತೆ ಜಾತ್ರೆಯ ಮೈದಾನದಲ್ಲಿ ಕಸಗೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಎಸ್‌ಪಿ ಸಂಗೀತಾ ಪೌರಕಾರ್ಮಿಕರಿಗೆ ಉಪಹಾರವನ್ನೂ ಕೂಡ ಬಡಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಜಿಲ್ಲಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಜಾತ್ರೆಯಲ್ಲಿ ಜನರೇ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಂಡು ಅಜ್ಜನ ಸೇವೆ ಮಾಡುವುದು ವಿಶೇಷವಾಗಿದೆ.