Asianet Suvarna News Asianet Suvarna News

ಮುಸ್ಲಿಮರು ಒನ್‌ಸೈಡ್ ಮತ ಕೊಟ್ಟಿದ್ದಾರೆ ಅಂತ ಹೇಳಿದ್ದೇನೆ ತಪ್ಪೇನಿದೆ: ಯೂಟರ್ನ್‌ ಹೊಡೆದ ಜಮೀರ್ ಅಹ್ಮದ್

ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್‌ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಜಮೀರ್ ಅಹ್ಮದ್‌ ಹೇಳಿದ್ದಾರೆ.

ಸಚಿವರು ಮುಸ್ಲಿಮರ ಕೆಲಸ ಮಾಡ್ಲೇ ಬೇಕ್ ಎಂದು ಹೇಳಿದ್ದ ಜಮೀರ್ ಅಹ್ಮದ್ ಯೂಟರ್ನ್‌ ಹೊಡೆದಿದ್ದಾರೆ. ಮುಸ್ಲಿಮರು (Muslims) ಒನ್‌ಸೈಡ್ ಮತ ನೀಡಿದ್ರು ಎಂದಿದ್ದೇನೆ. ಸಾಗರ್ ಖಂಡ್ರೆ (Sagar Khandre) 6 ಲಕ್ಷ ವೋಟ್ ಪಡೆದಿದ್ದಾರೆ. ಮುಸ್ಲಿಮರು 2 ಲಕ್ಷ ವೋಟ್ ನೀಡಿದ್ದಾರೆ. ಕೇವಲ 2 ಲಕ್ಷ ವೋಟ್‌ನಿಂದ ಗೆಲ್ಲಲು ಸಾಧ್ಯನಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಜಮೀರ್ ಅಹ್ಮದ್‌ (Zameer Ahmed Khan) ಹೇಳಿದ್ದಾರೆ. ಕೇವಲ ಮುಸ್ಲಿಮರು ಮಾತ್ರವಲ್ಲ, ನೀವೆಲ್ಲ ಸೇರಿ ಮತ ನೀಡಿದ್ದೀರಿ. ಎಂಪಿನೂ ನಮ್ಮವರೂ, ಸಚಿವರೂ ನಮ್ಮವರಿದ್ದಾರೆ. ಆ ಕಾರಣಕ್ಕೆ ಗೆದ್ದಿದ್ದಾರೆ ಅಂತ ಹೇಳಿದ್ದೇನೆ. ಸಾಗರ್ ಖಂಡ್ರೆ 6 ಲಕ್ಷ ವೋಟ್ ಪಡೆದಿದ್ದಾರೆ. ಇಷ್ಟು ವರ್ಷ ನಮ್ಮ ಎಂಪಿ ಇರಲಿಲ್ಲ, ಬಿಜೆಪಿ ಎಂಪಿ ಇದ್ದರು. ಈಗ ನಮ್ಮ ಎಂಪಿ ಬಂದಿದ್ದಾರೆ, ಕೆಲಸ ಮಾಡಿಸಿಕೊಳ್ಳಬಹುದು ಎಂದಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಪರಪ್ಪನ ಅಗ್ರಹಾರದಲ್ಲಿ ಹೇಗಿದ್ದಾನೆ ಗೊತ್ತಾ ದರ್ಶನ್‌ ? ಹೇಗಿದೆ ನಟನ ಜೈಲು ಜೀವನ..?