Asianet Suvarna News Asianet Suvarna News

ಪರಪ್ಪನ ಅಗ್ರಹಾರದಲ್ಲಿ ಹೇಗಿದ್ದಾನೆ ಗೊತ್ತಾ ದರ್ಶನ್‌ ? ಹೇಗಿದೆ ನಟನ ಜೈಲು ಜೀವನ..?


ಹೇಗಿದೆ ಗೊತ್ತಾ ಕಿಲ್ಲಿಂಗ್ ಸ್ಟಾರ್ ದರ್ಶನ್ ತೂಗುದೀಪನ ಜೈಲು ಜೀವನ..?
ಪಟ್ಟಣಗೆರೆಯ ಪ್ರತಾಪಕ್ಕೆ ಪರಪ್ಪನ ಅಗ್ರಹಾರ ಸೇರಿದ್ದಾನೆ ಕಿಲ್ಲಿಂಗ್ ಸ್ಟಾರ್..!
ಪರಪ್ಪನ ಅಗ್ರಹಾರದಲ್ಲಿ 13 ಮಂದಿ, 4 ಮಂದಿ ತುಮಕೂರು ಜೈಲಿಗೆ ಶಿಫ್ಟ್..!

ಆಕಾಶದಲ್ಲಿ ಹಾರಾಡ್ತಾ ಇದ್ದವವರು ಭೂಮಿಗೆ ಬೀಳಲೇಬೇಕು. ಎಷ್ಟೇ ದೊಡ್ಡವರಾದ್ರೂ ಕಾಲಚಕ್ರದ ಸುಳಿಗೆ ಸಿಲುಕಲೇಬೇಕು. ಈ ಮಾತಿಗೆ ರಾಜ್ಯದಲ್ಲಿ ಸದ್ಯ ಎರಡು ದೊಡ್ಡ ಉದಾಹರಣೆ ನಟ ದರ್ಶನ್ (Darshan) ಮತ್ತು ಮಾಜಿ ಸಚಿವ ಎಚ್.ಡಿ ರೇವಣ್ಣ ಕುಟುಂಬ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy murder case) ಜೈಲು ಸೇರಿರುವ ದರ್ಶನ್‌ಗೆ ಸುತ್ತಿಕೊಂಡಿರೋದು ಕರ್ಮ. ದರ್ಶನ್ ಈಗ ಪರಪ್ಪನ ಅಗ್ರಹಾರದಲ್ಲಿ ಕೈದಿ ನಂಬರ್ 6106. ರಿಪಬ್ಲಿಕ್ ಆಫ್ ದರ್ಶನ್ ಕೋಟೆಯ ಅಧಿಪತಿಯೀಗ ನಾಲ್ಕು ಗೋಡೆಗಳ ಮಧ್ಯೆ ಬಂಧಿ. ಪರಪ್ಪನ ಅಗ್ರಹಾರ(Parappana Agrahara jail) ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್ ಬಳಿ ಇರೋ ಸೆಂಟ್ರಲ್ ಜೈಲ್. ನಟೋರಿಯಸ್ ಕ್ರಿಮಿನಲ್‌ಗಳು, ರೌಡಿಗಳು, ಕೊಲೆಗಾರರು. ಹೀಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದವರ, ಅಪರಾಧಗಳನ್ನು ಮಾಡಿ ಶಿಕ್ಷೆ ಅನುಭವಿಸ್ತಾ ಇರೋರ ವಾಸಸ್ಥಾನ. ನಟ ದರ್ಶನ್ ಈಗ ಅದೇ ಜೈಲಿನಲ್ಲಿದ್ದಾನೆ. ಶನಿವಾರದವರೆಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸ್ ಲಾಕಪ್‌ನಲ್ಲಿದ್ದ ದರ್ಶನ್, ಶನಿವಾರ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತವನ ಕ್ರಿಮಿನಲ್ ಗ್ಯಾಂಗನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಇದನ್ನೂ ವೀಕ್ಷಿಸಿ:  ಆ ಸಾವಿಗೆ ಕಾರಣ.. ಈಗಲೂ ಅನುಮಾನ..ಈಗ ನೆನಪಾಗುತ್ತಿದೆ ಏಕೆ ಆ ನಿರ್ಮಾಪಕನ ಸಾವು..?

Video Top Stories