ಬಿಜೆಪಿ ಅಧಿಕಾರದಲ್ಲಿ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ರು: ಜಮೀರ್ ಅಹಮ್ಮದ್ ಖಾನ್

ಹಿಜಾಬ್, ಆಜಾನ್ ಸೇರಿ ಹಲವು ವಿಷಯದಲ್ಲಿ ಮುಸ್ಲಿಂರಿಗೆ ಸಂಕಷ್ಟ ಎದುರಾಗಿತ್ತು. ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಮುಸ್ಲಿಮರೆಲ್ಲಾ ಒಗ್ಗಟ್ಟಾಗಿ ಮತದಾನ ಮಾಡಿದ್ದಕ್ಕೇ ಕರ್ನಾಟಕದಲ್ಲಿ ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದಿದೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ರಹಸ್ಯವನ್ನು ಸಚಿವ ಜಮೀರ್ ಬಿಚ್ಚಿಟ್ಟಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದು ಎಂಬುದು ತಿಳಿದಿಲ್ಲ. ಮೂರೂವರೆ ವರ್ಷ ಬಿಜೆಪಿ(BJP) ಅವಧಿಯಲ್ಲಿ ಮುಸ್ಲಿಂರಿಗೆ (Muslims) ಸಂಕಷ್ಟ ಇತ್ತು. ಹಿಜಾಬ್, ಆಜಾನ್ ಸೇರಿ ಹಲವು ವಿಷಯದಲ್ಲಿ ಮುಸ್ಲಿಂರಿಗೆ ಸಂಕಷ್ಟ ಬಂದೊದಗಿತ್ತು. ಈ ಸಂಕಷ್ಟದ ವಿರುದ್ಧ ಮುಸ್ಲಿಂರೆಲ್ಲಾ ಒಗ್ಗಟ್ಟಾಗಿ ನಿಂತರು. ಎಲ್ಲಾ ಮುಸ್ಲಿಂರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ಮತ ಹಾಕಿದ್ದಾರೆ. ಒಗ್ಗಟ್ಟಿನ ಮತದಾನದ ಪರಿಣಾಮ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಪಂಚರಾಜ್ಯ ಚುನಾವಣೆ ಪ್ರಚಾರದ ವೇಲೆ ಜಮೀರ್ ಒಗ್ಗಟ್ಟಿನ ಪಾಠ ಮಾಡಿದ್ದಾರೆ. ಜಮೀರ್ ಮಾತನಾಡಿದ ವಿಡಿಯೋ ಸದ್ಯ ವೈರಲ್ ಆಗಿದೆ. ಜಮೀರ್ ಎಲ್ಲಿ ಮಾತನಾಡಿದ್ದು ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. 

ಇದನ್ನೂ ವೀಕ್ಷಿಸಿ: ರಾತ್ರಿ ಹೊತ್ತಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ವಕೀಲೆ ಕುಟುಂಬದ ವಿರುದ್ಧ ಒತ್ತುವರಿ ಆರೋಪ

Related Video