Asianet Suvarna News Asianet Suvarna News

ಮಾನವೀಯತೆಯನ್ನೇ ಮರೆತ ಜನ: ಗರ್ಭಿಣಿಗೆ ರಕ್ತ ಬರುವಂತೆ ಥಳಿಸಿದ ಪುಂಡರು!

ಚಿಂದಿ ಆಯುವ ಮಹಿಳೆಯ ಮೇಲೆ ಮನಬಂದಂತೆ ಥಳಿಸಿದ ಪುಂಡರು| ವಿಜಯಪುರದಲ್ಲಿ ನಡೆದ ಘಟನೆ| ಗರ್ಭಿಣಿ ಮಹಿಳೆಗೆ ರಕ್ತ ಬರುವಂತೆ ವೈರ್‌ನಿಂದ ಥಳಿತ| ವೃದ್ಧೆಗೂ ರಕ್ತ ಬರುವಂತೆ ಥಳಿಸಿದ ಪುಂಡರು|

First Published Dec 12, 2019, 1:24 PM IST | Last Updated Dec 12, 2019, 1:25 PM IST

ವಿಜಯಪುರ(ಡಿ.12): ಚಿಂದಿ ಆಯುವ ಮಹಿಳೆಯರ ಮೇಲೆ ಯುವಕರ ಗುಂಪೊಂದು ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಮಹಿಳೆಯರು ಕಳ್ಳತನ ಮಾಡುತ್ತಿದ್ದಾರೆ ಎಂದು ತಿಳಿದ ಪುಂಡರು  ಅಮಾನವೀಯವಾಗಿ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಪುಂಡರ ಗುಂಪು ಮಹಿಳೆಯರಿಗೆ ರಕ್ತ ಬರುವಂತೆ ವೈರ್‌ನಿಂದ ಥಳಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಗರ್ಭಿಣಿ ಇದ್ದೀನಿ ಬಿಡಿ ಎಂದು ಗೋಗರೆದರೂ ಮಾನವೀಯತೆ ಇಲ್ಲವೇನೋ ಎಂಬಂತೆ ಮನಬಂದಂತೆ ಹೊಡೆದಿದ್ದಾರೆ. ಮಹಿಳೆಯರ ಜೊತೆ ಇದ್ದ ವೃದ್ಧೆಗೂ ರಕ್ತ ಬರುವಂತೆ ಥಳಿಸಿ, ಹೊಟ್ಟೆಗೆ ಜೋರಾಗಿ ಒದ್ದಿದ್ದಾರೆ. ಈ ವಿಡಿಯೋ ನೋಡಿದ ಜನ ಪುಂಡರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. 

Video Top Stories