ಯೋಗೀಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಭೇಟಿಗೆ ಡಿಕೆಶಿ ಅರ್ಜಿ

* ಯೋಗೀಶ್‌ ಗೌಡ ಕೊಲೆ ಪ್ರಕರಣ
* ವಿನಯ್‌ ಕುಲಕರ್ಣಿ ಭೇಟಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಡಿ.ಕೆ. ಶಿವಕುಮಾರ್‌
* ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್‌ ಕುಲಕರ್ಣಿ

First Published Jun 3, 2021, 11:09 AM IST | Last Updated Jun 3, 2021, 11:13 AM IST

ಧಾರವಾಡ(ಜೂ.03): ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸೆಷನ್ ಕೋರ್ಟ್‌ಗೆ ಡಿ.ಕೆ. ಶಿವಕುಮಾರ್‌ ಅರ್ಜಿ ಸಲ್ಲಿಸಿದ್ದಾರೆ.     

ಬರಲಿದೆ ಕೊರೋನಾ 3ನೇ ಅಲೆ : ಎದುರಿಸಲು ಹೇಗಿರಬೇಕು ಸಿದ್ಧತೆ..?

ಜೈಲಿನಲ್ಲಿರುವ ವಿನಯ್‌ ಕುಲಕರ್ಣಿ ಭೇಟಿಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಭೇಟಿಯ ಕುರಿತು ಇಂದು ಆದೇಶ ಹೊರಡಿಸಲಿದೆ ಕೋರ್ಟ್‌. ಕೊಲೆ ಪ್ರಕರಣದ ಆರೋಪಿ ವಿನಯ್‌ ಕುಲಕರ್ಣಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.