Asianet Suvarna News Asianet Suvarna News

ಯಕ್ಷಗಾನ ಮಾಡುವಾಗ ಕಲಾವಿದರಿಗೆ ದೈವ ಆವಾಹನೆ, ವಿಡಿಯೋ ವೈರಲ್..!

Mar 13, 2021, 1:22 PM IST

ಉಡುಪಿ (ಮಾ. 13): ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿ ಬಾರೀ ಸುದ್ದಿಯಾಗಿತ್ತು. ಈ ಸುದ್ದಿ ಬೆನ್ನಲ್ಲೆ ಕರಾವಳಿಯ ಯಕ್ಷಗಾನ ಕಲಾವಿದರೊಬ್ಬರಿಗೆ 
ಯಕ್ಷಗಾನ ನಡೆಯುತ್ತಿದ್ದಾಗ ದೈವ ಆವಾಹನೆ ಆದ ವಿಡಿಯೋ ಬಾರೀ ವೈರಲ್ ಆಗುತ್ತಿದೆ. 

ಒಂದೆಡೆ ಶಿವಪೂಜೆ, ಇನ್ನೊಂದೆಡೆ ನಾಗರಹಾವುಗಳ ನೃತ್ಯ, ಅರೇ, ಏನೀ ಪವಾಡ..?

ಬಡಗುತಿಟ್ಟುವಿನ ಪ್ರಸಿದ್ಧ ಹಟ್ಟಿಯಂಗಡಿ ಮೇಳದಿಂದ, ಉಡುಪಿ ಜಿಲ್ಲೆಯಲ್ಲಿ ದೈವದ ಮಹಿಮೆಗೆ ಸಂಬಂಧಿಸಿದ ಪ್ರಸಂಗದ ಯಕ್ಷಗಾನ ನಡೆಯುತ್ತಿತ್ತು.. ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರು ದೈವದ ವೇಷ ಧರಿಸಿ, ದೀವಟಿಕೆ ಹಿಡಿದುಕೊಂಡು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶದ ಸಂದರ್ಭದಲ್ಲಿ ದೈವ ಆವಾಹನೆ ಆಗಿದೆ. ಕೂಡಲೇ ಸಹಾಯಕ ದೀವಟಿಕೆ ತೆಗೆದುಕೊಂಡಿದ್ದಾನೆ.