ಬೆಳಗಾವಿ: ವೈನ್ ಶಾಪ್ ಮಾಲೀಕನ ಬೆವರಿಳಿಸಿ, ಅಂಗಡಿ ಬಂದ್ ಮಾಡಿಸಿದ ನಾರಿಮಣಿಯರು..!
ಬೆಳ್ಳಂಬೆಳಗ್ಗೆ ವೈನ್ಸ್ ಮಾಲೀಕನ ಬೆವರನ್ನು ನಾರಿಮಣಿಯರು ಇಳಿಸಿದ್ದಾರೆ. ಅಲ್ಲದೇ ಊರ ಮದ್ಯದಲ್ಲಿದ್ದ ವೈನ್ಸ್‌ಗೆ ಬೀಗವನ್ನು ಮಹಿಳೆಯರು ಜಡಿದಿದ್ದಾರೆ.
ಚಿಕ್ಕೋಡಿ: ಊರ ಮದ್ಯದಲ್ಲಿದ್ದ ವೈನ್ಸ್ ಶಾಪ್‌ಗೆ ಮಹಿಳೆಯರು ಬೀಗ ಜಡಿದಿದ್ದಾರೆ. ಬೆಳ್ಳಂಬೆಳಗ್ಗೆ ವೈನ್ಸ್ ಮಾಲೀಕನ ಬೆವರಿಳಿಸಿ ನಾರಿಮಣಿಯರು ಶಾಪ್‌ಗೆ ಬೀಗ ಹಾಕಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಧ್ಯದಲ್ಲಿರೋ ಶ್ರೀ ಲಕ್ಷ್ಮಿ ವೈನ್ಸ್ ವಿರುದ್ಧ ಮಹಿಳೆಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಮದ್ಯಪಾನ ಮಾಡಿ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಕುಡುಕರು ಚುಡಾಯಿಸುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಅಲ್ಲದೇ ಕಂಠಪೂರ್ತಿ ಕುಡಿದು ಬಸ್ ನಿಲ್ದಾಣದ ಬಳಿ ದಾಂಧಲೆ ಮಾಡ್ತಾರೆ ಎಂದು ಹೇಳಲಾಗ್ತಿದೆ. ನಮ್ಮ ಗಂಡದಿರು ಬೆಳಂಬೆಳಗ್ಗೆ ಕುಡಿದು ಕೆಲಸಕ್ಕೂ ಹೋಗದೇ , ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿಯಾಗಿದೆ.ಅಷ್ಟೇ ಅಲ್ಲದೇ ಶ್ರೀ ಲಕ್ಷ್ಮೀ ವೈನ್ಸ್‌ನ ಕೂದಲಳತೆ ದೂರದಲ್ಲಿಯೇ ಸರ್ಕಾರಿ ಶಾಲೆ ಇದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಿದ್ದಿದೆ, ಹಾಗಾಗಿ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ: ಈಶ್ವರಪ್ಪ