Chitradurga: ರಾಯರ ಮಠದಲ್ಲಿ ನಡೀತು ಪವಾಡ..! ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಬಂತು ಮರು ಜೀವ..!

ಈ ಸುದ್ದಿ ನೋಡಿದ್ರೆ ನಿಮಗೂ ಆಶ್ಚರ್ಯವಾಗುತ್ತೆ...!
ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದಿದ್ದೇನು..?
ವೀಲ್ ಚೇರ್ ನಲ್ಲಿ ಬಂದಿದ್ದ ಯುವತಿ ಎದ್ದು ಓಡಾಟ

Share this Video
  • FB
  • Linkdin
  • Whatsapp

ಚಿತ್ರದುರ್ಗದ ರಾಯರ ಮಠದಲ್ಲಿ ಪವಾಡವೊಂದು ನಡೆದಿದ್ದು, ಇಲ್ಲಿ ನಡೆದಾಡುವ ಶಕ್ತಿಯನ್ನು ಯುವತಿ ಪಡೆದಿದ್ದಾಳೆ. ವೀಲ್ ಚೇರ್‌ನಲ್ಲಿ(Wheel Chairs) ಇದ್ದ ಯುವತಿ ಎದ್ದು ಓಡಾಡುತ್ತಿದ್ದಾಳೆ. ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಮರು ಜೀವ ಬಂದಿದೆ. 3 ಹೆಜ್ಜೆ ಹಾಕದವಳು , ರಾಯರಿಗೆ 3 ಸುತ್ತು ಪ್ರದಕ್ಷಿಣೆ ಹಾಕಿದ್ದಾಳೆ. ರಾಯರ ಮಠದಲ್ಲಿ(Rayara Mutt) ಹೆಜ್ಜೆ ಇಟ್ಟವಳ ಕಾಲುಗಳಿಗೀಗ ಮರು ಜೀವ ಬಂದಿದೆ. ಇದೆಲ್ಲ ಗುರು ರಾಘವೇಂದ್ರರ ಮಹಿಮೆ ಅಂತಿದ್ದಾರೆ ಪೋಷಕರು. ಬೆಂಗಳೂರಿನ(Bengaluru) ಯಲಹಂಕದ ವಾಸವಾಗಿರುವ ತೇಜಸ್ವಿನಿ, 19 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರುವ ತೇಜಸ್ವಿನಿಗೆ 6 ತಿಂಗಳಿನಿಂದ ವೀಲ್ ಚೇರ್ ಅವಲಂಭಿಸಿದ್ದಳು. ದೀಪಾವಳಿ ಸಂದರ್ಭದಲ್ಲಿ ಮಂತ್ರಾಲಯಕ್ಕೆ(Mantralaya) ತೆರಳಿದ್ದರು. 45 ದಿನದೊಳಗೆ ಶುಭ ಸುದ್ದಿ ಸಿಗಲಿದೆ ಎಂದು ಗುರುಗಳು ಆಶೀರ್ವಾದ ಮಾಡಿದ್ರು. ಈ ಮಧ್ಯೆ ಶಿವಮೊಗ್ಗ ಆಯುರ್ವೇದ ವೈದ್ಯರ ಬಳಿಯೂ ಚಿಕಿತ್ಸೆ ಪಡೆದಿದ್ದರೂ, ಕಳೆದ ಬುಧವಾರ ಶಿವಮೊಗ್ಗದಿಂದ ವಾಪಸ್ ಆಗುವಾಗ ಅಚ್ಚರಿ ಮಾರ್ಗ ಮಧ್ಯೆ ಚಿತ್ರದುರ್ಗದ ರಾಯ ಮಠಕ್ಕೆ ಭೇಟಿ. ರಾಯರ ಧ್ಯಾನ ಮಾಡುತ್ತಾ ಯುವತಿ ಪ್ರದಕ್ಷಿಣೆ ಹಾಕಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Skeletons in House: ಪಾಳುಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆ: ಈ ಸಾವಿನ ರಹಸ್ಯವೇನು ? ಯಾರು ಇವರು ?

Related Video