ಮತ್ತೆ ಕಲಬುರಗಿ ಮಹಾನಗರ ಪಾಲಿಕೆ ನಿರ್ಲಕ್ಷ: ಮಕ್ಕಳ ಶಾಲಾ ವಾಹನಕ್ಕೆ ಕರೆಂಟ್ ಶಾಕ್, ಮಹಿಳೆ ಸ್ಥಿತಿ ಗಂಭೀರ
ಕರೆಂಟ್ ಶಾಕ್ ನಿಂದ ಸ್ಥಳದಲ್ಲೇ ಮಹಿಳೆ ಕುಸಿದು ಬಿದ್ದಿದ್ದಾಳೆ. ಮಹಿಳೆಯ ಹೊಟ್ಟೆ, ಕಾಲು ಕೈ ಸುಟ್ಟು ತೀವ್ರತರವಾದ ಗಾಯಗಳಾಗಿವೆ. ಗಾಬರಿಯಿಂದ ಚೀರಾಡುತ್ತಿದ್ದ ಶಾಲಾ ಮಕ್ಕಳನ್ನು ಸ್ಥಳಿಯರು ರಕ್ಷಿಸಿದ್ದಾರೆ. ಕರೆಂಟ್ ಶಾಕ್ ನಿಂದ ಗಂಭಿರವಾಗಿ ಗಾಯಗೊಂಡ ಮಹಿಳೆ ಭಾಗ್ಯಶ್ರೀಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲಬುರಗಿ(ಡಿ.24): ಮಹಾನಗರ ಪಾಲಿಕೆಯಿಂದ ಮತ್ತೊಂದು ನಿರ್ಲಕ್ಷಕ್ಕೆ ವಿಶೇಷ ಮಕ್ಕಳ ಶಾಲಾ ವಾಹನಕ್ಕೆ ಕರೆಂಟ್ ತಾಗಿ ಓರ್ಹ ಮಹಿಳೆಯ ಮಹಿಳೆ ಸ್ಥಿತಿ ಗಂಭೀರವಾದ ಘಟನೆ ನಗರದಲ್ಲಿ ನಡೆದಿದೆ. ದುರ್ಘಟನೆಯಲ್ಲಿ 11 ಶಾಲಾ ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿ ನಗರದ ಮೋಹನ್ ಲಾಡ್ಜ್ ಸಮೀಪದ ಬೀದಿ ದೀಪದ ಬಳಿ ಘಟನೆ ಸಂಭವಿಸಿದೆ.
ರಸ್ತೆ ಬದಿ ನಿಂತ ಶಾಲಾ ವಾಹನಕ್ಕೆ ವಿದ್ಯುತ್ ತಂತಿ ತಗುಲಿದೆ. ಆದ್ರೆ ಟಯರಗಳ ಕಾರಣ ಬಸ್ ನಲ್ಲಿದ್ದ ಮಕ್ಕಳಿಗೆ ಕರೆಂಟ್ ಶಾಕ್ ಅನುಭವ ಆಗಿರಲಿಲ್ಲ. ಮಹಿಳೆಯೊಬ್ಬರು ತನ್ನ ಮಗುವನ್ನು ಬಸ್ ನಲ್ಲಿ ಹತ್ತಿಸಿ ಬಸ್ ಗೆ ಕೈ ತಾಕಿಸಿ ನಿಂತಾಗ ಮಹಿಳೆಗೆ ಕರೆಂಟ್ ಶಾಕ್ ಹೊಡೆದಿದೆ. ಮಹಿಳೆ ಬಸ್ ಗೆ ಟಚ್ ಮಾಡುತ್ತಿದ್ದಂತೆಯೇ ಗ್ರೌಂಡ್ ಅರ್ಥಿಂಗ್ ಆಗಿ ಕರೆಂಟ್ ಶಾಕ್ ಹೊಡೆದಿದೆ.
ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!
ಕರೆಂಟ್ ಶಾಕ್ ನಿಂದ ಸ್ಥಳದಲ್ಲೇ ಮಹಿಳೆ ಕುಸಿದು ಬಿದ್ದಿದ್ದಾಳೆ. ಮಹಿಳೆಯ ಹೊಟ್ಟೆ, ಕಾಲು ಕೈ ಸುಟ್ಟು ತೀವ್ರತರವಾದ ಗಾಯಗಳಾಗಿವೆ. ಗಾಬರಿಯಿಂದ ಚೀರಾಡುತ್ತಿದ್ದ ಶಾಲಾ ಮಕ್ಕಳನ್ನು ಸ್ಥಳಿಯರು ರಕ್ಷಿಸಿದ್ದಾರೆ. ಕರೆಂಟ್ ಶಾಕ್ ನಿಂದ ಗಂಭಿರವಾಗಿ ಗಾಯಗೊಂಡ ಮಹಿಳೆ ಭಾಗ್ಯಶ್ರೀ ಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ನಗರ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದೇ ಮಾದರಿಯ ಘಟನೆಯಿಂದ ಬಸ್ ನಿಲ್ದಾಣದ ಬಳಿ ಶಾಲಾ ಬಾಲಕನೊಬ್ಬ ಮೃತಪಟ್ಟಿದ್ದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ದುರ್ಘಟನೆ ನಡೆದಿದೆ. ಮಹಾನಗರ ಪಾಲಿಕೆಯ ನಿರ್ಲಕ್ಷತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದ ರಸ್ತೆ ದಾಟುತ್ತಿದ್ದ 14 ವರ್ಷದ ಬಾಲಕ ಕರೆಂಟ್ ತಗುಲಿ ಸಾವಿಗೀಡಾಗಿದ್ದ, ಈ ಘಟನೆಯ ನಂತರವೂ ಬೀದಿ ದೀಪಗಳ ಸುತ್ತ ಕರೆಂಟ್ ವಯರಗಳು ಹರಿದು ಬಿದ್ದಿರುವ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳದಿದ್ರೆ ಮತ್ತಷ್ಟು ಬಲಿ ಸಾಧ್ಯತೆ ಎಂದು ಸುವರ್ಣ ನ್ಯೂಸ್ ಎಚ್ಚರಿಸಿತ್ತು. ಆದರೂ ಮಹಾನಗರ ಪಾಲಿಕೆ ಎಚ್ಚರಗೊಂಡಿಲ್ಲ. ಇದರ ಪರಿಣಾಮ ಇಂದು ಕರೆಂಟ್ ತಗುಲಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ.