Asianet Suvarna News Asianet Suvarna News

ಬೆಂಗ್ಳೂರು ರಸ್ತೆ ಗುಂಡಿಗೆ ಮತ್ತೊಂದು ಸಾವು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜೀವಗಳು ಬಲಿ ಬೇಕು?

Oct 8, 2021, 12:46 PM IST

ಬೆಂಗಳೂರು(ಅ.08): ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಮಹಿಳೆ ದುರ್ಮರಣಕ್ಕೀಡಾದ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ಇಂದು(ಶುಕ್ರವಾರ) ನಡೆದಿದೆ. ಟಿಪ್ಪರ್‌ ಹರಿದ ಪರಿಣಾಮ ಮಹಿಳೆ ಮೃತಪಟ್ಟು ಇಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೊನ್ನೆ ಇದೇ ರಸ್ತೆಯಲ್ಲಿ ಕಾನ್ಸ್‌ಟೇಬಲ್‌ವೊಬ್ಬರು ಸಾವನ್ನಪ್ಪಿದ್ದರು. ಬೆಂಗಳೂರು ಗುಂಡಿಗೆ ಬಿಬಿಎಂಪಿ ಯಾವಾಗ ಮುಕ್ತಿ ಹಾಡುತ್ತೆ ಎಂಬ ಸಾರ್ವಜನಿಕರ ಪ್ರಶ್ನೆಯಾಗಿದೆ. ರಸ್ತೆ ಗುಂಡಿಗೆ ಬಡಜೀವಗಳು ಬಲಿಯಾಗುತ್ತಿದ್ದರೂ ಕೂಡ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿದೆ. 

ರಾಹುಲ್ ಎಂಟರ್‌ಪ್ರೈಸಸ್‌ನಲ್ಲಿ ಇಂದೂ ಮುಂದುವರೆದ ಐಟಿ ಶೋಧ

Video Top Stories