ಮಲೆನಾಡಿನಲ್ಲಿ ಮಳೆಯ ಅಬ್ಬರ..ಉಕ್ಕಿ ಹರಿಯುತ್ತಿದೆ ತುಂಗೆ..ಗಾಜನೂರು ಜಲಾಶಯದತ್ತ ಪ್ರವಾಸಿಗರ ದಂಡು..!
ಅನಾವರಣ ಆಗ್ತಿದೆ ಪ್ರಕೃತಿಯ ಅಪರೂಪದ ಸೌಂದರ್ಯ..!
ವರುಣ ದೇವನಿಂದ ಜೀವನದಿಗಳಿಗೆ ಮತ್ತೆ ಬಂತು ಜೀವಕಳೆ..!
ಕೆಆರ್‌ಎಸ್ ಜಲಾಶಯ ನೀರಿನಮಟ್ಟ 110 ಅಡಿಗೂ ಹೆಚ್ಚು..!
ಈ ಬಾರಿ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈ ಮಳೆಯಿಂದ (Rain) ಒಂದು ಕಡೆ ಅನಾಹುತಗಳು ನಡೆದ್ರೆ, ಮತ್ತೊಂದೆಡೆ ಜಲಪಾತಗಳು(Falls) ಮೈದುಂಬಿ ಹರಿಯುತ್ತಿವೆ. ಇದೀಗ ಈ ಜಲಪಾತಗಳು ಪ್ರವಾಸಿಗರನ್ನು(Tourists) ತನ್ನತ್ತ ಕೈಬೀಸಿ ಸಹ ಕರೆಯುತ್ತಿವೆ. ನಮ್ಮ ಕಣ್ಣು, ಮನಸ್ಸಿಗೆ ಪ್ರಕೃತಿ ತನ್ನ ಸೌಂದರ್ಯದ ಮೂಲಕ ಭೂರಿ ಭೋಜನ ಉಣಬಡಿಸಲಾಗುತ್ತಿದೆ. ಇದರ ಜೊತೆಗೆ ಪ್ರಕೃತಿಯ ಅಪರೂಪದ ಸೌಂದರ್ಯ ಅನಾವರಣವಾಗುತ್ತಿದೆ. ಇನ್ನೂ ಭರ್ಜರಿ ಮಳೆಯಿಂದ ಕಾವೇರಿಗೆ ಮತ್ತೆ ಜೀವ ಕಳೆ ಬಂದಂತಾಗಿದೆ.ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 110 ಅಡಿಗೂ ಹೆಚ್ಚಾಗಿದೆ.
ಇದನ್ನೂ ವೀಕ್ಷಿಸಿ: ರೀಲ್ಸ್ ಹುಚ್ಚಿಗೆ ಬಿದ್ದ ಮಹಾಶಯ ಮಾಡಿದ್ದ ಹುಚ್ಚಾಟ ಏನು..? ರೀಲ್ಸ್ ಮಾಡುವವರೇ ಎಚ್ಚರ..ಎಚ್ಚರ..ಎಚ್ಚರ..!