ಬಾರೋ.. ಬಾರೋ.. ಮಳೆರಾಯ ಕಾವೇರಿ ಒಡಲಲ್ಲಿ ನೀರಿಲ್ಲ: ಕುಡಿಯುವ ನೀರಿಗೂ ಅಭಾವವಾಗುವ ಸಾಧ್ಯತೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆ ಕೆಆರ್‌ಎಸ್ ಡ್ಯಾಮ್‌ನಲ್ಲಿ ನೀರು ಕಾಲಿಯಾಗುತ್ತಿದ್ದು, ಮಂಡ್ಯದ ಜನ ನೀರಿನ ಕೊರತೆ ಎದುರಿಸುವ ಸಾಧ್ಯತೆ ಇದೆ.
ಮಂಡ್ಯ: ಜಿಲ್ಲೆಯ ಕೆಆರ್‌ಎಸ್ ಡ್ಯಾಮ್‌ನಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕೇವಲ 81 ಅಡಿಯಷ್ಟು ಮಾತ್ರ ನೀರು ಇದೆ. ಕಳೆದ ಎರಡು ವರ್ಷದಲ್ಲಿ ದಾಖಲೆ ಮಟ್ಟದಲ್ಲಿ ನೀರು ಕುಸಿದಿದೆ. 11 ಟಿಎಂಸಿ ನೀರು ಮಾತ್ರ ಡ್ಯಾಮ್‌ನಲ್ಲಿ ಇದೆ. ಡ್ಯಾಮ್‌ಗೆ ಬರುವ ನೀರಿನ ಒಳ ಹರಿವು ಕಡಿಮೆ ಸಹ ಇದೆ. ಕೇವಲ ನಾಲ್ಕು ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಲಾಗ್ತಿದೆ. ಕೆಲ ದಿನಗಳ ಹಿಂದೆ ಮಳೆಗಾಗಿ ಪಾರ್ಥಿಸಿ ಪರ್ಜನ್ಯ ಹೋಮವನ್ನು ಸಹ ಮಾಡಲಾಗಿತ್ತು. ಪೂಜೆಯಾದ ಕೇಲವೇ ಗಂಟೆಗಳಲ್ಲಿ ಸ್ವಲ್ಪ ಮಳೆಯಾಗಿತ್ತು ಬಿಟ್ಟರೇ, ಜಾಸ್ತಿ ಮಳೆಯಾಗಿಲ್ಲ. ಒಂದು ವೇಳೆ ಮಳೆ ಇದೇ ರೀತಿ ಕೈಕೊಟ್ಟರೇ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ.
ಇದನ್ನೂ ವೀಕ್ಷಿಸಿ: ವಿಶ್ವದದ್ಯಾಂತ ತೆರೆಕಂಡ ಆದಿಪುರುಷ್: ಸಿನಿಮಾ ಬಗ್ಗೆ ಅಭಿಮಾನಿಗಳು ಹೇಳೋದೇನು ?