Asianet Suvarna News Asianet Suvarna News

ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯಾದ್ಯಂತ ಸಿದ್ಧತೆ: ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ

ದೀಪಾವಳಿ ಹಬ್ಬಕ್ಕೆ ದಿನಗಣನೇ ಶುರುವಾಗಿದೆ. ದೇಶದಾದ್ಯಂತ ಬೆಳಕಿನ ಹಬ್ಬದ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದೆ. ಆದ್ರೆ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ದುರಂತಗಳು ಸಂಭವಿಸುತ್ತೆ ಎಂದು ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳಲಾಗಿದೆ.
 

ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವು ದಿನಗಳು ಬಾಕಿ ಇದೆ. ರಾಜ್ಯಾದ್ಯಂತ ದೀಪಾವಳಿಗೆ(Deepavali) ಸಿದ್ಧತೆಗಳು ನಡೆಯುತ್ತಿವೆ.. ದೀಪಾವಳಿ ಅಂದ್ಮೇಲೆ ಪಟಾಕಿ ಸಂಭ್ರಮ ಇದ್ದಿದ್ದೆ.ಇತ್ತೀಚೆಗೆ ನಡೆದ ಪಟಾಕಿ ದುರಂತಗಳಿಂದ ಎಚ್ಚೆತ್ತ ಸರ್ಕಾರ ಡೇಂಜರ್ ಪಟಾಕಿ ಬ್ಯಾನ್(cracker Ban) ಮಾಡಿದೆ.ಆದ್ರೆ, ಹಸಿರು ಪಟಾಕಿಗೆ ನಿರ್ಬಂಧವಿಲ್ಲ.ಮುನ್ನೆಚ್ಚರಿಕೆಗಳ ನಡುವೆಯೂ ಪಟಾಕಿ ದುರಂತಗಳು ಸಂಭವಿಸಲು ಬಹುದು.. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗಳು(Hospital) ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಪೈಕಿ ಶೇ.40 ರಷ್ಟು 14 ವರ್ಷದ ಮಕ್ಕಳೇ ಇದ್ದಾರೆ. ಎಷ್ಟೋ ಜನ ಕಣ್ಣನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ ಈ ಬಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.ಪಟಾಕಿ ಸಂಭ್ರಮದ ವೇಳೆ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವಾರ್ಡ್ಗಳನ್ನು ಮೀಸಲಿಡಲಾಗಿದೆ.  ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ. ಮಹಿಳೆಯರ ವಾರ್ಡ್ ನಲ್ಲಿ 18 ಬೆಡ್, ಪುರುಷರ ವಾರ್ಡ್ ನಲ್ಲಿ 10 ಬೆಡ್ ಹಾಗೂ ಮಕ್ಕಳಿಗೆ 8 ಬೆಡ್ ವ್ಯವಸ್ಥೆ ಮಾಡಲಾಗಿದೆ...ಇನ್ನು ಹಬ್ಬದ ವೇಳೆ ಸುಮಾರು 1 ವಾರಗಳ ಕಾಲ ಈ ವಾರ್ಡ್ಗಳಲ್ಲಿ ದಿನದ 24 ಗಂಟೆ ಚಿಕಿತ್ಸೆ ನೀಡಲು ತಯಾರಿ ನಡೆದಿದೆ. ಇನ್ನೂ ಅಗತ್ಯಬಿದ್ದರೆ ಹೆಚ್ಚುವರಿಯಾಗಿ 15 ಬೆಡ್ಗಳ ಒಂದು ವಾರ್ಡ್ ಸಿದ್ದಪಡಿಸಿಕೊಳ್ಳಲಾಗುತ್ತೆ ಅಂತ ಮಿಂಟೋ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಅಕಾಲಿಕ ಮಳೆಗೆ ಅನ್ನದಾತ ಕಂಗಾಲು..ಕಟಾವಿಗೆ ಬಂದ ಬೆಳೆ ನೀರಲ್ಲಿ..ರೈತರ ಕಣ್ಣೀರು

Video Top Stories