ಅಕಾಲಿಕ ಮಳೆಗೆ ಅನ್ನದಾತ ಕಂಗಾಲು..ಕಟಾವಿಗೆ ಬಂದ ಬೆಳೆ ನೀರಲ್ಲಿ..ರೈತರ ಕಣ್ಣೀರು

ಪ್ರತಿ ವರ್ಷದಂತೆ ಈ ವರ್ಷವೂ ಬೆಳೆದ ಬೆಳೆ ಕೈಗೆ ಸಿಗುತ್ತೆ ಅಂತ ರೈತರು ಅಂದುಕೊಂಡಿದ್ರು. ಆದರೆ ಅಕಾಲಿಕವಾಗಿ ಸುರಿದ ವರುಣ ಕೊಪ್ಪಳ ಮತ್ತು ದಾವಣಗೆರೆ ರೈತರ ಕನಸಿಗೆ ಕೊಳ್ಳಿ ಇಟ್ಟಿದ್ದಾನೆ.
 

First Published Nov 10, 2023, 11:46 AM IST | Last Updated Nov 10, 2023, 11:46 AM IST

ಒಂದೆಡೆ ಅಕಾಲಿಕ ಧಾರಾಕಾರ ಮಳೆ. ಇನ್ನೊಂದೆಡೆ  ನೆಲಕಚ್ಚಿದ ಭತ್ತದ ಬೆಳೆ. ಭತ್ತದ ಫಸಲು(paddy crop) ಉಳಿಸಿಕೊಳ್ಳಲು ರೈತರ (Farmers)ಹರಸಾಹಸ. ರಾಜ್ಯದ ಬಹುತೇಕ ಭಾಗದಲ್ಲಿ ಕಂಡುಬರುವ ದೃಶ್ಯಗಳಿದು. ಕೊಪ್ಪಳ, ದಾವಣಗೆರೆ(Davanagere) ಜಿಲ್ಲೆಗಳಲ್ಲಿ ಹೀಗೆ ನೂರಾರು ಎಕರೆ ಭತ್ತದ ಬೆಳೆ ನೆಲ ಕಚ್ಚಿದೆ.. ಕಟಾವಿಗೆ ಬಂದಿದ್ದ ಬೆಳೆ ಮಳೆಯಿಂದ ನೀರು ಪಾಲಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಪ್ಪಳದಲ್ಲಿ(Koppal) ಇನ್ನೇನು ಒಂದು ವಾರ ಕಳೆದರೆ ಭತ್ತ ಕಟಾವು ಕೆಲಸ ಆರಂಭವಾಗುತ್ತಿತ್ತು.. ಅಷ್ಟರೊಳಗೆ ವರುಣನ ಅಕಾಲಿಕ ಎಂಟ್ರಿ ಅನ್ನದಾತನ ಲೆಕ್ಕಚಾರವನ್ನೇ ಬುಡಮೇಲು ಮಾಡಿದೆ. ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಗಂಗಾವತಿ,ಕಾರಟಗಿ‌,ಕೊಪ್ಪಳ ತಾಲೂಕಿನ ಕಿನ್ನಾಳ ಭಾಗದಲ್ಲಿ ಅತೀ ಹೆಚ್ಚು ಭತ್ತದ ಬೆಳೆ ಹಾನಿಯಾಗಿದೆ. ಬೆಳೆ ಜಲಸಮಾಧಿಗೆ ಕಂಗಾಲಾದ ರೈತರು ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲೂ ರೈತರ ಪರಿಸ್ಥಿತಿ ಭಿನ್ನವಾಗಿಲ್ಲ.. ಭತ್ತ, ಮೆಕ್ಕೆಜೋಳ ಬೆಳೆ ಸಂಪೂರ್ಣ ನಾಶವಾಗಿದೆ. ಭದ್ರಾ ಜಲಾಶಯದ ನೀಡು ಬಳಸಿಕೊಂಡು ಅಂದಾಜು 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ಬೆಳೆಯಲಾಗಿದೆ. ಇದರಲ್ಲಿ ಶೇ 25 ರಷ್ಟು ಕೊಯ್ಲಿಗೆ ಬಂದಿತ್ತು.. ಆದ್ರೆ, ಇನ್ನೇನ್ ಕಟಾವು ಮಾಡ್ಬೇಕು ಎನ್ನುವಷ್ಟರಲ್ಲಿ ಸುರಿದ ಮಳೆಯಿಂದ ಸೋನಾ ಮಸೂರಿ ಭತ್ತ ಜಲಸಮಾಧಿಯಾಗಿದೆ. ಭತ್ತ ಬೆಳೆ ಬೆಳೆಯಲು ಒಂದು ಎಕರೆಗೆ ಸುಮಾರು, 30 ಸಾವಿರ ರೂಪಾಯಿ ಖರ್ಚಾಗುತ್ತೆ. ಸಾಲಸೂಲ ಮಾಡಿ ಭತ್ತ ನಾಟಿ ಮಾಡಿದ್ರು. ಅಕಾಲಿಕ ಮಳೆಯಿಂದ ಭತ್ತದ ಗದ್ದೆಯಲ್ಲಿ ನೀರು ನಿಂತು ಬೆಳೆ ನಾಶವಾಗುತ್ತಿದ್ದು, ರೈತರನ್ನ ಕಂಗಾಲಾಗಿಸಿದೆ.

ಇದನ್ನೂ ವೀಕ್ಷಿಸಿ:  ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ: ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!