ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಕರೆಂಟ್‌ ಶಾಕ್‌: ಬಿಲ್‌ ನೋಡಿ ಹೌಹಾರಿದ ವಿಟಿಯು ಕುಲಪತಿ !

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ವಿಭಾಗೀಯ ಕೇಂದ್ರ ಸೇರಿ ಹೆಸ್ಕಾಂ ಈ ತಿಂಗಳು 35 ಲಕ್ಷ ಬಿಲ್‌ ನೀಡಿದೆ.ಇದರಿಂದ ವಿಟಿಯು ಕುಲಪತಿ ಹೌಹಾರಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಕರೆಂಟ್‌ ಬಿಲ್‌ ಹೆಚ್ಚಳ ಕಗ್ಗಂಟು ಮುಂದುವರೆದಿದೆ. ದರ ಏರಿಕೆಯಿಂದ ಬಂದ ಕರೆಂಟ್‌ ಬಿಲ್‌ ನೋಡಿ ಬೆಳಗಾವಿಯ ವಿಟಿಯು ಕುಲಪತಿ ಹೌಹಾರಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಹೆಸ್ಕಾಂ ಒಟ್ಟು 35 ಲಕ್ಷ ಬಿಲ್‌ ನೀಡಿದೆ. ಇನ್ನೂ ವಿಟಿಯುನ ಐದು ವಿಭಾಗೀಯ ಕೇಂದ್ರಗಳಿಂದ 7 ಲಕ್ಷ ಬಿಲ್‌ ಬಂದಿದೆ. ದರ ಏರಿಕೆಯಿಂದ 10 ಲಕ್ಷ ಹೆಚ್ಚುವರಿ ಬಿಲ್ ಬಂದಿದೆ. ಹೀಗಾಗಿ ಹೆಸ್ಕಾಂಗೆ ಪತ್ರ ಬರೆಯಲು ಕುಲಪತಿ ವಿದ್ಯಾಶಂಕರ್‌ ಮುಂದಾಗಿದ್ದಾರೆ. ಗೊಂದಲ ಬಗೆಹರಿದ ಬಳಿಕ ಬಿಲ್ ಕಟ್ಟುವುದಾಗಿ ಅವರು ತಿಳಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಆಶಾಡ ಮಾಸದಲ್ಲಿ ಆಶಿಕಾಗೆ ಮದುವೆ ಆಸೆ: ನಟಿಗೆ ಗಂಡನಾಗೋ ಹುಡುಗ ಆ ನಟನಂತಿರಬೇಕೆಂತೆ !

Related Video