ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್‌ ಮೇಲೆ ಶಾಕ್‌..!: ಆರಂಭದಲ್ಲಿ ಸಲ್ಲಿಸಿದ್ದ ಅರ್ಜಿಗಳಲ್ಲಿ ತಾಂತ್ರಿಕ ದೋಷ ?

ಗೃಹಜ್ಯೋತಿ ಯೋಜನೆಗೆ ಮೊದಲೆರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು ತಿರುಸ್ಕೃತವಾಗಿವೆ. ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ. 
 

First Published Jul 11, 2023, 10:05 AM IST | Last Updated Jul 11, 2023, 10:05 AM IST

ಗೃಹಜ್ಯೋತಿ ಯೋಜನೆಗೆ(Gruha Jyoti Scheme) ಮೊದಲ ಎರಡು ದಿನ ಅರ್ಜಿ ಸಲ್ಲಿಸಿದವರ ಅರ್ಜಿಗಳು( Application) ತಿರಸ್ಕೃತವಾಗಿದೆ ಎಂದು ತಿಳಿದುಬಂದಿದೆ. ತಾಂತ್ರಿಕ ಲೋಪ(Technical error) ಉಂಟಾಗಿರುವುದರಿಂದ ಈ ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗ್ತಿದೆ. ಆರಂಭದಲ್ಲಿ ಸೇವಾ ಸಿಂಧು ಸರ್ವರ್‌ ಡೌನ್‌(Seva Sindhu server down) ಇತ್ತು. ಹಾಗಾಗಿ ಅರ್ಜಿ ಲಿಂಕ್‌ ಆಗದಿರುವ ಸಾಧ್ಯತೆ ಇದೆ. ಒಂದು ವೇಳೆ ಈ ಎರಡು ದಿನ ಅರ್ಜಿ ಸಲ್ಲಿಸಿದ್ರೆ, ನಿಮ್ಮ ಸ್ಟೇಟಸ್‌ನನ್ನು ಚೆಕ್‌ ಮಾಡಿಕೊಳ್ಳಿ. ಒಂದು ವೇಳೆ ತಿರಸ್ಕೃತವಾಗಿದ್ರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಿ. ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಗೆ ಒಂದು ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ.ಉಚಿತ ವಿದ್ಯುತ್‌ ಯೋಜನೆ ಬೇಕೆಂದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಜುಲೈ 25ರೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರವೇ ಮುಂದಿನ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಶುಲ್ಕವು ಕಡಿತವಾಗಲಿದೆ. 

ಇದನ್ನೂ ವೀಕ್ಷಿಸಿ:  ರಾಜಕೀಯ ತಿರುವು ಪಡೆದ ವೇಣುಗೋಪಾಲ್‌ ಹತ್ಯೆ ಪ್ರಕರಣ: ಇಂದು ಸಾಂತ್ವನ ಹೇಳಲಿರುವ ಬಿಜೆಪಿ ನಿಯೋಗ

Video Top Stories