ನಡುರಸ್ತೆಯಲ್ಲಿ ಗೂಳಿಗಳ ಗುದ್ದಾಟ... ವಿಡಿಯೋ ವೈರಲ್

ನಡುರಸ್ತೆಯಲ್ಲಿ ಗೂಳಿಗಳೆರಡು ಗುದ್ದಾಡಿದ ಘಟನೆ ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ನಡೆದಿದ್ದು, ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

First Published Jan 20, 2022, 1:57 PM IST | Last Updated Jan 20, 2022, 1:57 PM IST

ವಿಜಯಪುರ: ನಡುರಸ್ತೆಯಲ್ಲಿ ಗೂಳಿಗಳೆರಡು ಗುದ್ದಾಡಿದ ಘಟನೆ ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ನಡೆದಿದ್ದು, ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿದೆ.  ಕಪ್ಪು ಹಾಗೂ ಬಿಳಿ ಬಣ್ಣದ ಗೂಳಿಗಳೆರಡು ನಡು ರಸ್ತೆಯಲ್ಲಿ ಮದಗಜಗಳಂತೆ ಕಾದಾಟಕ್ಕೆ ಇಳಿದಿವೆ. ನಿರಂತರ ವಾಹನ ಸಂಚಾರವನ್ನು ಲೆಕ್ಕಿಸದೇ ರಸ್ತೆಯ ಮಧ್ಯದಲ್ಲೇ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಇವುಗಳು ಗುದ್ದಾಡಿವೆ.  ಅಲ್ಲದೇ ವಾಹನ ಸವಾರರು ಹಾರ್ನ್ ಮಾಡಿದ್ರೂ, ರಸ್ತೆ ಮೇಲಿಂದ ಗೂಳಿಗಳು ಹಿಂದೆ ಸರಿಯಲು ಸಿದ್ಧರಿರಲಿಲ್ಲ. ಹೀಗಾಗಿ ವಾಹನ ಸವಾರರು ರಸ್ತೆಯನ್ನು ಗೂಳಿಗಳಿಗೆ ಬಿಟ್ಟು ರಸ್ತೆ ಬದಿಯಿಂದ ಸಂಚರಿಸಲು ಶುರು ಮಾಡಿದ್ದಾರೆ. ಇನ್ನು ಈ ಸಹಜವಾಗಿ ನಡೆದ  ಗೂಳಿ ಕಾಳಗವನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿದ್ದರು.

Bull Drives off lions: ದಾಳಿ ಮಾಡಲು ಬಂದ ಸಿಂಹಗಳ ಬೆನ್ನಟ್ಟಿದ ಎತ್ತು

Video Top Stories