ರಾಮಮಂದಿರ ಲೋಕಾರ್ಪಣೆಗೆ ಕೂಡಿ ಬಂದ ಶುಭ ಮುಹೂರ್ತ: ಉದ್ಘಾಟನೆ ಯಾವಾಗ ಗೊತ್ತಾ ?
ವಿಶ್ವದಾದ್ಯಂತ ಕುತೂಹಲದಿಂದ ಎದುರು ನೋಡ್ತಿದ್ದ ಅಯೋದ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ರಾಮಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ.
ಹಲವು ದಶಕಗಳ ವಿವಾದ ಬಗೆಹರಿದ ಬಳಿಕ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ತಲೆಎತ್ತಿ ನಿಂತಿದೆ. ಇಷ್ಟು ದಿನ ದೇಶದ ಹಿಂದೂಗಳೆಲ್ಲ ಕಾತದಿಂದ ಕಾಯ್ತಾ ಇದ್ದ ರಾಮಮಂದಿರದ(Ram Temple) ಉದ್ಘಾಟನಾ ಸಮಯ ಬಂದೇ ಬಿಟ್ಟಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ(Ayodhya) ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರವನ್ನು 2024ರ ಜನವರಿ 22ರಂದು ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಾಗುವುದು. ಅಂದು ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಲು ಮುಹೂರ್ಥ ಫಿಕ್ಸ್ ಮಾಡಲಾಗಿದೆ. ಜನವರಿ 21ರಿಂದ 24ರವರೆಗೆ ರಾಮಲಲ್ಲಾವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆ’ ಕಾರ್ಯ ಜರುಗಲಿದೆ. ಜನವರಿ 22ರಂದು ಗರ್ಭಗೃಹದಲ್ಲಿ ರಾಮ(Rama) ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಖಚಿತಪಡಿಸಿದ್ದಾರೆ. ರಾಮಮಂದಿರ ಉದ್ಘಾಟನೆಗೊಳಿಸಲು ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ.ರಾಮಮಂದಿರ ಟ್ರಸ್ಟ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೂಡ ಈ ವೇಳೆ ಹಾಜರಿದ್ದರು. ರಾಮ ಮಂದಿರ ಉದ್ಫಾಟನೆ ಆಹ್ವಾನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಖುಷಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಸೋಶಿಯಲ್ ಮೀಡಿಯಾದಲ್ಲಿ ‘ಲಿಯೋ ಸ್ಕ್ಯಾಮ್’ನದ್ದೇ ಸದ್ದು: ಕ್ರೇಜ್ ಕಡಿಮೆ ಆಗ್ತಿದ್ದರೂ ಕಲೆಕ್ಷನ್ ಮಾತ್ರ ಜಬರ್ದಸ್ತ್..!