Asianet Suvarna News Asianet Suvarna News

ಬರ ಪರಿಸ್ಥಿತಿಯಲ್ಲಿ ವಿಜಯಪುರ ರೈತರಿಗೆ ಮತ್ತೊಂದು ಬರೆ: ಡ್ಯಾಂನಿಂದ ಕೆನಾಲ್‌ಗೆ ಬಿಟ್ಟರು ಜಮೀನು ಸೇರದ ನೀರು..!

ಅದ್ಯಾಕೋ ಗೊತ್ತಿಲ್ಲ, ಗುಮ್ಮಟನಗರಿಯ ರೈತರ ಹಣೆಬರಹವೇ ಸರಿ ಇದ್ದಂತೆ ಕಾಣ್ತಿಲ್ಲ. ಮಳೆ ಇಲ್ಲದೆ ಬೆಳೆದು ನಿಂತ ಬೆಳೆ ಒಣಗುತ್ತಿದೆ. ಹೀಗಾಗಿಯೇ ರೈತರಿಗೆ ಅನುಕೂಲವಾಗಲಿ ಎಂದು ಆಲಮಟ್ಟಿ ಡ್ಯಾಂ ನಿಂದ ಕೆನ್ಯಾಲ್‌ಗಳಿಗೆ ನೀರು ಹರಿಬಿಡಲಾಗಿದೆ. ಆದ್ರೆ ಡ್ಯಾಂನಿಂದ ಬಿಡಲಾಗಿರುವ ನೀರು ರೈತರ ಹೊಲಗಳಿಗೆ ತಲುಪುತ್ತಿಲ್ಲ. ಈ ನಡುವೆ ಕೆನಾಲ್‌ಗಳ ಕ್ಲೀನಿಂಗ್‌ನಲ್ಲಿ ಗೋಲ್ಮಾಲ್‌ ನಡೆದಿರೋ ಆರೋಪ ಗಟ್ಟಿಯಾಗಿ ಕೇಳಿ ಬರ್ತಿದೆ.

ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಅನ್ನೋ ಗಾದೆ ಗುಮ್ಮಟ ನಗರಿ ರೈತರಿಗೆ(Farmer) ಅನ್ವಯಿಸುವಂತಿದೆ. ಯಾಕಂದ್ರೆ ಸರಿಯಾಗಿ ಮಳೆಯಿಲ್ಲದೆ ಬರ ಪರಸ್ಥಿತಿ ಎದುರಿಸುತ್ತಿದ್ದ ವಿಜಯಪುರ(Vijayapura) ಜಿಲ್ಲೆಯ ರೈತರಿಗೆ ಆಲಮಟ್ಟಿ ಡ್ಯಾಂನಿಂದ(Allamatti Dam) ಕೃಷಿ ಉದ್ದೇಶಕ್ಕಾಗಿ ಕೆನಾಲ್‌ನಿಂದ ನೀರು ಬಿಡುಗಡೆ ಮಾಡಲಾಗಿದೆ. ಆದ್ರೆ ಡ್ಯಾಂನಿಂದ ಕಾಲುವೆಗೆ ನೀರು ಬಿಟ್ಟರು ರೈತರ ಜಮೀನುಗಳಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಹಾಗಿದ್ದರೆ ಕಾಲುವೆಯಲ್ಲಿ ಬಿಟ್ಟ ನೀರು(Water) ಎಲ್ಲಿಗೆ ಹೋಗುತ್ತೆ ಎನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಉತ್ತರ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು. ಕೆನಾಲ್‌ ಸ್ವಚ್ಛಗೊಳಿಸದ ಕಾರಣ ಕೆಲವೆಡೆ ಹೂಳು ತುಂಬಿಕೊಂಡಿದೆ. ವಿಜಯಪುರದ ಕೋಲಾರ ತಾಲೂಕಿನ ರೋಣಿಹಾಳ ಗ್ರಾಮದ ರೈತರ ಜಮೀನಿಗೆ ಬಿಡುವ ಕಾಲುವೆಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಪ್ರತಿ ವರ್ಷ ಆಲಮಟ್ಟಿ ಡ್ಯಾಂ ಭರ್ತಿಯಾದ ಬಳಿಕ ಡ್ಯಾಂನಿಂದ ರೈತರ ಜಮೀನುಗಳಿಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಬಿಡಲಾಗುತ್ತೆ. ಕಾಲುವೆಗಳು ಖಾಲಿ ಇರೋವಾಗ ಅಂದ್ರೆ ಬೇಸಿಗೆ ಸಮಯದಲ್ಲಿ ಕಾಲುವೆಗಳನ್ನ ಸರಿಯಾದ ರೀತಿಯಲ್ಲಿ ಕ್ಲೀನಿಂಗ್‌ ಮಾಡಿಕೊಳ್ಳಬೇಕಾಗಿತ್ತು. ಆದ್ರೆ, ಕಾಲುವೆ ಹೂಳೆತ್ತಲು ಅನುದಾನ ಬಿಡುಗಡೆಯಾದ್ರೂ, ಕೆಲಸ ಮಾಡದೇ  ಹಣ ಪಡೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಅವನ ಕೊಲೆಯ ಹಿಂದಿತ್ತು ತ್ರಿಕೋನ ಪ್ರೇಮ ಕಹಾನಿ ! ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಡೆಡ್ಲಿ ಮರ್ಡರ್ !

Video Top Stories