ದರ್ಶನ್‌ ಗ್ಯಾಂಗ್‌ಗೆ ಕಂಟಕವಾಗುತ್ತಾ 'ಆ' 2 ಪೆನ್‌ ಡ್ರೈವ್‌? ಪೊಲೀಸರು ಸಿದ್ಧಪಡಿಸಿರುವ ಇದರಲ್ಲಿ ಏನಿದೆ ?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಜಿಬಿಯ ಎರಡು ಪೆನ್‌ ಡ್ರೈವ್‌ ಸಿದ್ಧಪಡಿಸಿದ್ದು, ದರ್ಶನ್‌ ಗ್ಯಾಂಗ್‌ ಇದು ಕಂಟಕವಾಗುವ ಸಾಧ್ಯತೆ ಇದೆ.

First Published Jul 8, 2024, 4:24 PM IST | Last Updated Jul 8, 2024, 4:24 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ದರ್ಶನ್ (Darshan) ಗ್ಯಾಂಗ್‌ಗೆ ಆ ಎರಡು ಪೆನ್‌ ಡ್ರೈವ್‌(Pen drive)) ಕಂಟಕವಾಗುವ ಸಾಧ್ಯತೆ ಇದೆ. ಪೊಲೀಸರು(Police) ಸಿದ್ಧ ಪಡಿಸಿರುವ ಆ ಪೆನ್ ಡ್ರೈವ್‌ನಲ್ಲಿ ಏನಿದೆ ಎಂಬುದು ಇನ್ನೂ ತಿಳಿದಿಲ್ಲ. 8 ಜಿಬಿಯ ಎರಡು ಪೆನ್ ಡ್ರೈವ್‌ನನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ದೀಪಕ್ , ನಂದೀಶ್‌ಗೆ ಸಂಬಂಧಿಸಿದ 2 ಪೆನ್ ಡ್ರೈವ್ ಇದಾಗಿದೆ. ಆರೋಪಿಗಳ ಗೂಗಲ್ ಟೈಮ್ ಲೈನ್  ಡಾಟಾ ಸಂಗ್ರಹ ಮಾಡಲಾಗಿದೆ ಎನ್ನಲಾಗ್ತಿದೆ. ದೀಪಕ್ ಶಾಸಕರ ಸಂಬಂಧಿ, ನಂದೀಶ್ ದರ್ಶನ್ ಮನೆಯ ಕೆಲಸದವನಾಗಿದ್ದಾನೆ. ಇಬ್ಬರು ಮೊಬೈಲ್‌ನಲ್ಲೂ ಗೂಗಲ್ ಟೈಮ್ ಲೈನ್ ಇತ್ತು. ಅಪರಾಧ ನಡೆದ ಪ್ರತಿ ಜಾಗದಲ್ಲೂ ಇಬ್ಬರು ಓಡಾಡಿದ್ದರು. ಆರೋಪಿಗಳು ಘಟನಾ ಸ್ಥಳದಲ್ಲಿ ಇದ್ದರು ಎನ್ನುವುದಕ್ಕೆ ಮಹತ್ವದ ಸಾಕ್ಷಿ ದೊರೆತಿದೆ.

ಇದನ್ನೂ ವೀಕ್ಷಿಸಿ:  ಐಡೆಂಟಿಫಿಕೇಷನ್ ಪರೇಡ್‌ನಿಂದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ! ಮೂವರು ಆರೋಪಿಗಳನ್ನ ಜೈಲಿನಲ್ಲಿ ಪತ್ತೆ ಹಚ್ಚಿದ ಸಾಕ್ಷಿಗಳು