ಗೋಳಿನ ಕಥೆ: ಎಚ್‌ಡಿಕೆ ಕೊಟ್ಟ ಭರವಸೆ ಬಿಎಸ್‌ವೈ ಸರ್ಕಾರ ಈಡೇರಿಸುತ್ತಾ?

ಕಳೆದ ವರ್ಷ ಈ ಹೊತ್ತಿಗೆ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿತ್ತು ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ವಿಷ ಪ್ರಸಾದ ಘಟನೆ. ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದರು.

Share this Video
  • FB
  • Linkdin
  • Whatsapp

ಚಾಮರಾಜನಗರ (ಡಿ.14): ಕಳೆದ ವರ್ಷ ಈ ಹೊತ್ತಿಗೆ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿತ್ತು ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ವಿಷ ಪ್ರಸಾದ ಘಟನೆ. ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದರು. 

ಘಟನೆಯೇನೋ ನಡೆದು ಹೋಯ್ತು, ಪ್ರಕರಣ ದಾಖಲಾಯ್ತು, ತನಿಖೆ ನಡೆಯಿತು, ಕೆಲವರು ಕಂಬಿ ಹಿಂದೆ ಹೋದ್ರು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಆದರೆ, ಘಟನೆಯಲ್ಲಿ ಅಸ್ವಸ್ಥರಾಗಿದ್ದವರಿಗೆ ಇನ್ನೂ ಕೂಡಾ ನ್ಯಾಯ ಸಿಕ್ಕಿಲ್ಲ. ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಬಿ.ಎಸ್. ಯಡಿಯೂರಪ್ಪ ಏನಾದ್ರೂ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿ ಸಂತ್ರಸ್ತರು ದಿನ ದೂಡುತ್ತಿದ್ದಾರೆ. 

Related Video